‘ಪಾಪ್ಯುಲರ್​ ಪೊಲಿಟೀಶಿಯನ್​ ಯಾರೆಂದು ಕೊಡಗಿನಲ್ಲಿ ಕೇಳಿ ನನ್ನ ಬಗ್ಗೆ ತಿಳಿಯುತ್ತದೆ’ : ಪ್ರತಾಪ್​ ಸಿಂಹ ಟಾಂಗ್​

ಮೈಸೂರು : ‘ಕೊಡಗಿನಲ್ಲಿ ಮೋಸ್ಟ್ ಪಾಪ್ಯುಲರ್ ಪೊಲಿಟೀಶಿಯನ್ ಯಾರು ಅಂತಾ ಕೇಳಿ ಆಗ ನಿಮಗೆ ನನ್ನ ಕೆಲಸದ ಬಗ್ಗೆ ಗೊತ್ತಾಗುತ್ತೆ’ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ತಮ್ಮ ಪಕ್ಷದ ನಾಯಕರಿಗೆ ಟಾಂಗ್​ ನೀಡಿದ್ದಾರೆ.

ತಮ್ಮ ಮೇಲೆ ತಮ್ಮ ಪಕ್ಷದ ಮುಖಂಡ ನೀಡಿದ್ದ ಹೇಳಿಕೆಗೆ ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್​ ಸಿಂಹ, ‘ಕೊಡಗಿನಲ್ಲಿ ಮೋಸ್ಟ್ ಪಾಪ್ಯುಲರ್ ಪೊಲಿಟೀಶಿಯನ್ ಯಾರು ಅಂತಾ ಕೇಳಿ ಆಗ ನಿಮಗೆ ನನ್ನ ಕೆಲಸದ ಬಗ್ಗೆ ಗೊತ್ತಾಗುತ್ತೆ, ಕೊಡಗಿನ ಜನಕ್ಕೆ ನಾನು ಏನೂ ಅಂತಾ ಗೊತ್ತಿದೆ,  ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪಕ್ಕೆ ನಾನು ಉತ್ತರ ಕೊಡಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ.

ದೇಶದಲ್ಲಿ ಸೂಟಕೇಸ್ ಸಂಸ್ಕೃತಿ ಕಲಿಸಿದ್ದೆ ಕಾಂಗ್ರೆಸ್, ಹಿಂದೆ ಹಲವು ಬಾರಿ ಬೇರೆ ಪಕ್ಷದ ಸಂಸದರನ್ನು ಸೂಟ್ ಕೇಸ್ ಕೊಟ್ಟು ಕಾಂಗ್ರೆಸ್ ಖರೀದಿ ಮಾಡಿದೆ, ಇಂತಹ ಸಂಸ್ಕೃತಿಯ ಪಕ್ಷದಲ್ಲಿನ ಶಾಸಕರು ಈಗ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಅಷ್ಟೇ, ದುಡ್ಡಿಗೆ ಮರುಳಾಗುವ ದುರ್ಬಲ ಮನಸ್ಸು ತಮ್ಮ ಶಾಸಕರಿಗೆ ಇದೆ ಅಂತಾ ಕಾಂಗ್ರೆಸ್ ಹೀಗೆ ಬಿಜೆಪಿ ಮೇಲೆ ಆರೋಪ ಮಾಡ್ತಿದೆ. ಆಪರೇಷನ್ ಕಮಲದ ವಿಚಾರಕ್ಕೆ ಕಾಂಗ್ರೆಸ್ ಮೇಲೆ ಸಂಸದ ಪ್ರತಾಪ್ ಸಿಂಹ  ಹರಿಹಾಯ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.