ಪದ್ಮಾವತಿ ಪರ ಡಿಕೆಶಿ ಪ್ರಚಾರ : ಎಂಟಿಬಿ ಬಗ್ಗೆ ಭವಿಷ್ಯ ನುಡಿದ ಕನಕಪುರ ಬಂಡೆ

ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಹೊಸಕೋಟೆ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಸೋಲುವುದು ಖಚಿತ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.

ಹೊಸಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಡಿಕೆಶಿ, ಎಂಟಿಬಿ ನಾಗರಾಜ್ ಅವರು ಆಸ್ತಿಯನ್ನೆಲ್ಲಾ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಬರೆದುಕೊಟ್ಟರೂ ಸೋಲು ಖಚಿತ, ಎಂಟಿಬಿಯ ರಾಜಕೀಯ ಸಮಾಧಿಗೆ ಕೊನೆ ಹಾರವನ್ನು ಡಿಸೆಂಬರ್ 5 ರಂದು ಮತದಾರರು ಹಾಕಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಂಟಿಬಿ ನಾಗರಾಜ್ ಅವರು ಬಿಜೆಪಿಯಲ್ಲಿ ಹರಕೆಯ ಕುರಿ ಆಗುವುದು ನಿಶ್ಚಿತ. ಚುನಾವಣೆಯ ನಂತರ ಅವರ ರಾಜಕೀಯ ಜೀವನ ನಾಶವಾಗುತ್ತದೆ. ಮತದಾರರು ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.