IND vs NZ : 2nd ODI : ಮತ್ತೊಂದು ಜಯದ ನಿರೀಕ್ಷೆಯಲ್ಲಿ ಕೊಹ್ಲಿಪಡೆ – ತಿರುಗೇಟು ನೀಡುವ ತವಕದಲ್ಲಿ ಕಿವೀಸ್

ಮೌಂಟ್ ಮೌಂಗಾನುಯಿಯ ಬೇ ಓವಲ್ ಮೈದಾನದಲ್ಲಿ ಶನಿವಾರ ಭಾರತ ಹಾಗೂ ಆತಿಥೇಯ ನ್ಯೂಜಿಲೆಂಡ್ ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ನಡೆಯಲಿದೆ. 5 ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆಯಲ್ಲಿರುವ ಭಾರತ ಮತ್ತೊಂದು ಜಯ ದಾಖಲಿಸಿ ಸರಣಿಯ ಮೇಲೆ ಬಿಗಿಹಿಡಿತ ಸಾಧಿಸುವ ಹಂಬಲದಲ್ಲಿದೆ. ಇನ್ನೊಂದೆಡೆ ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ಬಳಗ ಕೊಹ್ಲಿಪಡೆಗೆ ತಿರುಗೇಟು ನೀಡುವ ತವಕದಲ್ಲಿದೆ.

ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಭಾರತ 8 ವಿಕೆಟ್ ಸುಲಭ ಜಯ ಗಳಿಸಿತ್ತು. ಕೊಹ್ಲಿಪಡೆ ಮೊದಲ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನೇ ಮರುಕಳಿಸುವ ಮೂಲಕ ಜಯದ ಓಟವನ್ನು ಮುಂದುವರೆಸುವವ ಉದ್ದೇಶ ಹೊಂದಿದೆ.

ಉತ್ತಮ ಫಾರ್ಮ್ ನಲ್ಲಿರುವ ಮೊಹಮ್ಮದ್ ಶಮಿ ಹಾಗೂ ಕುಲದೀಪ್ ಯಾದವ್ ಕಿವೀಸ್ ಬ್ಯಾಟ್ಸಮನ್ ಗಳನ್ನು ಕಟ್ಟಿಹಾಕುವ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಕಳೆದ ಪಂದ್ಯದಲ್ಲಿ 75 ರನ್ ಗಳಿಸಿದ್ದ ಶಿಖರ್ ಧವನ್ ಬ್ಯಾಟಿಂಗ್ ನಲ್ಲಿ ಉತ್ತಮ ಲಯದಲ್ಲಿದ್ದು, ಭಾರತದ ಮಟ್ಟಿಗೆ ಸಕಾರಾತ್ಮನಕ ಅಂಶ ಎನಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.