ಜಾರ್ಖಂಡ್ ವಿಧಾನಸಭೆ ಚುನಾವಣೆಯ ಶಾಂತಿ ಕದಡಿದ ನಕ್ಸಲರು : ಆತಂಕದಲ್ಲಿ ಮತದಾರರು

ಇಂದು ನಡೆಯುತ್ತಿದ್ದ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಶಾಂತಿ ಕದಡುವ ಕೆಲಸವನ್ನು ನಕ್ಸಲರು ಮಾಡಿದ್ದಾರೆ.

ಹೌದು… ಭಾರೀ ಕುತೂಹಲ ಕೆರಳಿಸಿರುವ ಜಾರ್ಖಂಡ್ ವಿಧಾನಸಭೆಯ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ನಕ್ಸಲರು ಸೇತುವೆಯೊಂದನ್ನು ಸ್ಫೋಟಿಸಿ ಭಯಭೀತ ವಾತಾವರಣ ಸೃಷ್ಟಿಸಿದ್ದಾರೆ.  ನಕ್ಸಲ್ ಹಾವಳಿ ಇರುವ ಪ್ರದೇಶಗಳೂ ಸೇರಿದಂತೆ 13 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರೀ ಬಿಗಿ ಭದ್ರತೆ ನಡುವೆ ಇಂದು ಮತದಾನ ನಡೆಯಿತು. ಆದರೂ ನಕ್ಸಲರು ಸೇತುವೆ ಸ್ಪೋಟಿಸಿದ ಪರಿಣಾಮ ಜನ ಆತಂಕಗೊಂಡಿದ್ದಾರೆ.

ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾದ ಕೆಲವು ನಿಮಿಷಗಳಲ್ಲೇ ಗುಮ್ಲಾ ಜಿಲ್ಲೆಯ ಬಿಷ್ಣುಪುರ್‍ನಲ್ಲಿ ಮಾವೋವಾದಿ ಬಂಡುಕೋರರು ಸೇತುವೆಯೊಂದನ್ನು ಆಸ್ಫೋಟಿಸಿದ್ದಾರೆ.  ದೃಷ್ಟವಶಾತ್ ಈ ಕೃತ್ಯದಲ್ಲಿ ಸಾವು-ನೋವು ಸಂಭವಿಸಿಲ್ಲ. ಆದರೆ ಈ ಘಟನೆಯಿಂದ ಬಿಷ್ಣುಪುರ್ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ಆತಂಕಕ್ಕೆ ಕಾರಣವಾಗಿತ್ತು.  ಬ್ರಿಡ್ಜ್ ಸ್ಫೋಟ ಘಟನೆಯನ್ನು ಹೊರತುಪಡಿಸಿದರೆ ಉಳಿದೆಡೆ ಮತದಾನ ಬಹುತೇಕ ಶಾಂತಿಯುತವಾಗಿತ್ತು.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.