ಡೆನಿಸ್ ಮುಕ್ವೆಗೆ ಹಾಗೂ ನಾದಿಯಾ ಮುರಾದ್ ಗೆ 2018ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿ

ಕಾಂಗೋ ವೈದ್ಯ ಡೆನಿಸ್ ಮುಕ್ವೆಗೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ನಾದಿಯಾ ಮುರಾದ್ ಅವರಿಗೆ 2018ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲು ನಾರ್ವೆ ನೋಬೆಲ್ ಸಮಿತಿ ಶುಕ್ರವಾರ ನಿರ್ಧರಿಸಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಿದ ಹಿನ್ನೆಲೆಯಲ್ಲಿ ನಾದಿಯಾ ಮುರಾದ್ ಹಾಗೂ ಡೆನಿಸ್ ಮುಕ್ವೆಗೆ ಅವರಿಗೆ ನೋಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನೋಬೆಲ್ ಸಮಿತಿ ಮುಂದಾಗಿದೆ.

Image result for denis mukwege

ಕಾಂಗೋ ದೇಶದವರಾದ ವೈದ್ಯ ಡೆನಿಸ್ ಮುಕ್ವೆಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅನೇಕ ಮಹಿಳೆಯರಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದರು. ಮಹಿಳೆಯರ ಮೇಲೆ ನಡೆಯುವ ಶೋಷಣೆಯ ವಿರುದ್ಧ ಧ್ವನಿಯೆತ್ತಿದ್ದ ಕಾರಣಕ್ಕಾಗಿ ಡೆನಿಸ್ ಗೆ ನೋಬೆಲ್ ಶಾಂತಿ ಪುರಸ್ಕಾರ ನೀಡಲಾಗುತ್ತಿದೆ.

Image result for nadia murad

ಇರಾಕ್ ಯಾಜಿದಿ ಸಮುದಾಯಕ್ಕೆ ಸೇರಿದ ನಾದಿಯಾ ಮುರಾದ್ ರನ್ನು ಐಸಿಸ್ ಉಗ್ರರು ಅಪಹರಿಸಿದ್ದರು. ಮೂರು ವರ್ಷ ಐಸಿಸ್ ಗುಲಾಮಗಿರಿಯಲ್ಲಿದ್ದ ಕುರ್ದಿಶ್ ಮಹಿಳೆ ನಾದಿಯಾ ಉಗ್ರರ ಬಂಧನದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದರು. ಯಾಜಿದಿ – ಕುರ್ದಿಶ್ ಮಹಿಳೆಯರ ಮಾನವ ಹಕ್ಕುಗಳ ರಕ್ಷಣೆಗಾಗಿ ನಾದಿಯಾ ಮುರಾದ್ ಹೋರಾಡುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.