ಮೈಸೂರು : ಕೊನೆಯ ಆಶಾಢ ಶುಕ್ರವಾರ : ಚಾಮುಂಡಿ ದರ್ಶನಕ್ಕೆ ರಾಜಕಾರಣಿಗಳ ದಂಡು

ಮೈಸೂರು : ಇಂದು ಕೊನೆಯ ಆಶಾಢ ಶುಕ್ರವಾರವಾಗಿರುವ ಹಿನ್ನಲೇ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತಸಾಗರವೇ ಹರಿದುಬರುತ್ತಿದ್ದು. ರಾಜಕರಣಿಗಳ ತಾಯಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ.

ಕೊನೆಯ ಆಶಾಢ ಶುಕ್ರವಾರದ ಹಿನ್ನಲೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದ ಪಡೆದರು. ಅನಂತರ ಮಾಧ್ಯಮದವರ ಜೊತೆ ಮಾತನಾಡಿದ ಡಿಕೆಶಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿ ಎಲ್ಲರಿಗೂ ಆಶಿರ್ವಾದ ಮಾಡಿದ್ದಾಳೆ. ಕಬಿನಿ‌ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಬಿಡುಗಡೆ ವಿಚಾರ. ನದಿ ಪಾತ್ರ ಜನರಿಗೆ‌ ಈಗಾಗಲೇ ಸೂಚನೆ ನೀಡಲಾಗಿದ್ದು, ಪ್ರವಾಹ ಉಂಟಾಗುವಂತಹ ಸ್ಥಳಗಳಲ್ಲಿ‌ ಈಗಾಗಲೇ ಎಚ್ಚರಿಕೆ ನೀಡಿದ್ದೇವೆ.

ನಂತರ ಸುದ್ದಿಗಾರರು ರಾಜಕೀಯ ಪ್ರಶ್ನೇ ಕೇಳಿದ್ದಕ್ಕೆ, ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ, ದೇವಿಯ ದರ್ಶನ ಪಡೆಯಲು ಬಂದಿದ್ದೇನೆ, ದೇವಿ ಮತ್ತು ಭಕ್ತನ ನಡುವಿನ ಸಂಬಂಧ ಅಷ್ಟೆ, ರೈತರ ಸಾಲ ಮನ್ನ ವಿಚಾರದಲ್ಲಿ ಕ್ಲಾರಿಟಿ ಇಲ್ಲ‌ ಅನ್ನೊ ವಿಚಾರ ರಿಯಾಕ್ಷನ್ ನೀಡಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ಮೈಸೂರಿನಲ್ಲಿ ‌ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಇನ್ನ ತಾಯಿ ದರ್ಶನ ಪಡೆಯಲು  ಬಂದಿದ್ದ ಬಿ ವೈ ವಿಜಯೇಂದ್ರ,  ಪ್ರಧಾನಿ ನರೇಂದ್ರ ಮೋದಿ‌ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕೆಂದು ಪ್ರಾರ್ಥನೆ  ಸಲ್ಲಿಸಿದರು. ತಮ್ಮ ಕಾರ್ಯಕರ್ತರ ಜತೆ ಮೆಟ್ಟಿಲು ಹತ್ತುವ ಮೂಲಕ ಚಾಮುಂಡಿಬೆಟ್ಟಕ್ಕೆ ತೆರಳಿದ ಬಿವೈ ವಿಜಯೇಂದ್ರ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ನರೇಂದ್ರ ಮೋದಿ ಅವರು ಇಂದು ವಿಶ್ವನಾಯಕರಾಗಿದ್ದಾರೆ. ಅವರಂತ  ನಾಯಕತ್ವ ದೇಶಕ್ಕೆ ಬೇಕಿದೆ . ಈ ಕಾರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾಗಬೇಕು ಎಂದು ಪ್ರಾರ್ಥನೆ ಸಲ್ಲಿಸದ್ದೇನೆ ಎಂದು ತಿಳಿಸಿದ್ದರು.

ಕಡೆಯ ಆಶಾಢ ಶುಕ್ರವಾರದ ಪ್ರಯುಕ್ತ  ನಾಡ ದೇವತೆ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಲು ಬೆಟ್ಟಕ್ಕೆ ಹೆಚ್ ಡಿ ರೇವಣ್ಣ ಭೇಟಿ ನೀಡಿದ್ದು, ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸದ ಹೆಚ್ ಡಿ ರೇವಣ್ಣ , ವಿರೋಧ ಪಕ್ಷಗಳ ಹೇಳಿಕೆಗಳಿಗೆ ರಿಯಾಕ್ಟ್ ಮಾಡದ ರೇವಣ್ಣ, ಈಶ್ವರಪ್ಪ ಕಮಿಷನ್ ಸರ್ಕಾರ ಹೇಳಿಕೆಗೆ ಈಶ್ವರಪ್ಪನನ್ನೇ ಕೇಳಿ‌ ಎಂದು ಹೇಳಿದ್ದರು.

ನಾಲ್ಕನೇ ಆಷಾಢ ಮಾಸದ ಶುಕ್ರವಾರ ಪ್ರಯುಕ್ತ, ನಾಡಿನ ಅದಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ, ಪುನಸ್ಕಾರ ಸಲ್ಲಿಸಿ  ದೇವಿ ದರ್ಶನಕ್ಕಾಗಿ ಮುಂಜಾನೆಯಿಂದಲೇ  ೩೦೦ ರೂ., ೫೦ ರೂ ಜನರು ಸರತಿ ಸಾಲಿನಲ್ಲಿ ಧರ್ಮ ದರ್ಶನದ ಕ್ಯೂಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿರುವ ದೇವಾಲಯದ ಒಳ, ಹೊರಾವರಣ ಪ್ರತಿವಾರದಂತೆ ಕಡೆಯ ಶುಕ್ರವಾರಕ್ಕೂ ಕೆ.ಎಸ್.ಆರ್.ಟಿ.ಸಿ. ಉಚಿತ ಸೇವೆ, ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಚಾಮುಂಡಿ ಬೆಟ್ಟ – ಚಾಮುಂಡಿ ಬೆಟ್ಟದಿಂದ ಹೆಲಿಪ್ಯಾಡ್ ವರೆಗೆ ಉಚಿತ ಬಸ್ ಮತ್ತು ಸಾರ್ವಜನಿಕರ ವಾಹನಗಳಿಗೆ ಹ್ಯಾಲಿಪ್ಯಾಡ್ ನಲ್ಲೇ ನಿಲುಗಡೆಗೆ ಸಾದ್ಯತೆ ಇದೆ

ಇಂದು ಬೆಳಗ್ಗೆ ೩.೩೦ ರಿಂದ ಪೂಜೆ  ಪುನಸ್ಕಾರ ನಡೆಯುತ್ತಿದ್ದು, ಕಡೆ ಆಷಾಡ ಶುಕ್ರವಾರದ ಪ್ರಯುಕ್ತ ದೇವಿಗೆ ಸಿಂಹ ವಾಹಿನಿ ಅಲಂಕಾರ ಇವತ್ತಿನ ವಿಶೇಷ ಅಲಂಕಾರ ಗರ್ಭಗುಡಿಯಿಂದ ಮುಖ್ಯದ್ವಾರದ ವರೆಗೆ ಹೂವಿನ ಅಲಂಕಾರಿಸಿದ್ದರು,  ಹಾಗೂ ಇಂದು ರಾತ್ರಿ ೧೦ ಗಂಟೆಯ ವರೆಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ. ನಾಳಿನ ಅಮವಾಸ್ಯೆ ಪೂಜೆ ಹಿನ್ನೆಲೆಯಲ್ಲಿ.  ಭಕ್ತರು ಇವತ್ತು ಮತ್ತು ನಾಳೆಯು ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೊಗುತ್ತಾರೆ ಎಂದು  ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.