ಮೈಸೂರು: ಮೊದಲ ಆಶಾಢ ಶುಕ್ರವಾರ ಪೂಜೆಗೆ ಹರಿದುಬಂದ ಭಕ್ತರು : ಸಿಎಂರಿಂದ ವಿಶೇಷ ಪೂಜೆ

ಮೈಸೂರು : ಮೊದಲ ಆಶಾಢ ಶುಕ್ರವಾರ ಹಿನ್ನಲೆ ಮೈಸೂರಿನ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ..

ಆಷಾಢ ಮಾಸದಲ್ಲಿ ಶಕ್ತಿ ದೇವತೆ ಚಾಮುಂಡೇಶ್ವರಿಯನ್ನ ಪೂಜಿಸಿದದರೆ ಇಷ್ಟಾರ್ಥಗಳು ಈಡೇರುತ್ತವೆ ಎಂದು ರಾಜ್ಯದ ವಿವಿಧ ಭಾಗಗಳಿಂದ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವರು. ವಿವಿಧ ಬಗೆಯ ಹೂಗಳಿಂದನಾಡ ಅಧಿದೇವತೆ ಕಂಗೊಳಿಸುತ್ತಿದ್ದು, ದೇವಾಲಯದ ಸುತ್ತಲೂ ಬಣ್ಣ ಬಣ್ಣದ ಹೂವಿನ ಅಲಂಕಾರ ಮಾಡಿದ್ದು, ಬೆಟ್ಟದಲ್ಲಿ ಸುಗಮ ಸಂಚಾರ ಹಾಗೂ ಗಣ್ಯ ವ್ಯಕ್ತಿಗಳಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನ ಭಕ್ತಾಧಿಗಳಿಗೆ ಸೇವಾ ಸಂಸ್ಥೆಗಳಿಂದ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.

CM hd kumaraswamy- Chamundi Hills –tomorrow- Tight –police security

ಹೀಗಾಗಿ ಆಗಮಿಸಿದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನ ಜಿಲ್ಲಾಡಳಿತ ಮಾಡಿಕೊಂಡಿದೆ.ಬೆಳಗ್ಗೆ 10 ಗಂಟೆ ಸುಮಾರಿಗೆ
ಕುಟುಂಬ ಸಮೇತ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿರೋ ಹೆಚ್ ಡಿ ಕುಮಾರಸ್ವಾಮಿ ಆಗಮದ ಹಿನ್ನಲೇಪೊಲೀಸ್ ಬಿಗ ಬಂದೋಬಸ್ತ್ ಏರ್ಪಡಿಸಲಾಗಿದೆ.

 

 

 

 

 

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.