ಇಂತಹ ಮಗ, ಸೊಸೆ ಯಾರಿಗೂ ಬೇಡ..! ಹೆತ್ತತಾಯಿಗೆ ಗೊತ್ತಿಲ್ಲದಂತೆ ಮಗ ಮಾಡಿದ್ದೇನು..?

ತಮಿಳುನಾಡು: ತಾಯಿ ದೇವರಿಗೆ ಸಮಾನ ಅಂತ ಹೇಳುತ್ತಾರೆ. ಆದರೆ ತಾಯಿಗೆ ಗೊತ್ತಿಲ್ಲದಂತೆ ಮಗ ಆಕೆಯ ಸಹಿಯನ್ನು ನಕಲು ಮಾಡಿ ಆಸ್ತಿ ಲಪಟಾಯಿಸಿದ್ದಾನೆ. ಈ ಮಗನ ನಿಧನ ನಂತರ ಸೊಸೆ ತನ್ನ ಮಗನ ಜೊತೆ ಸೇರಿ ಅತ್ತೆ ಮೃತಪಟ್ಟಿದ್ದಾರೆ ಎಂದು ಮರಣ ಪ್ರಮಾಣ ಪತ್ರವನ್ನು ಮಾಡಿಸಿ ಅತ್ತೆಯನ್ನು ಹೊರ ದಬ್ಬಿದ್ದಾಳೆ. ಸದ್ಯ ಈ ಹುದ್ದೆ ಕಾನೂನು ಹೋರಾಟದಲ್ಲಿ ಜಯಕ್ಕಾಗಿ ಕಾದು ಕುಳಿತಿದ್ದಾರೆ.

ತೊಟ್ಟಿ ಯಮಲ್ ಎಂಬ 85 ವರ್ಷದ ವೃದ್ಧೆ ಈಗ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಾನು ಜೀವಂತವಾಗಿದ್ದರೂ ಸೊಸೆ ಮರಣ ಪ್ರಮಾಣ ಪತ್ರವನ್ನು ಮಾಡಿಸಿ ಆಸ್ತಿಯನ್ನು ಲಪಟಾಯಿಸಿದ್ದು, ತನಗೆ ಆಸ್ತಿಯನ್ನು ಹಿಂದಿರುಗಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಹೈಕೋರ್ಟ್ ಅಲ್ಲಿನ ಮುನ್ಸಿಪಲ್ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದು, ಎಲ್ಲ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ ಮತ್ತು ಇದಕ್ಕೆ ಸೂಕ್ತ ಉತ್ತರ ನೀಡುವಂತೆ ಆದೇಶಿಸಿದೆ.

ಮಗ ಮಾಡಿದ್ದೇನು ?: ಈಕೆಯ ಮಗ ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು ನಕಲಿ ಸಹಿಗಳನ್ನು ಮಾಡಿದ್ದಾನೆ. ಅಲ್ಲದೆ ಇದಕ್ಕೆ ಮೂವರು ಸಹೋದರಿಯರ ಒಪ್ಪಿಗೆಯಿದೆ ಎಂದು ಕೂಡ ಪೋರ್ಜರಿ ಮಾಡಿಕೊಂಡಿದ್ದಾನೆ. ಬಳಿಕ ತನ್ನ ಮಗನ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಿಕೊಂಡಿದ್ದಾನೆ. ಆದರೆ 206ರಲ್ಲಿ ಮೃತಪಟ್ಟಿದ್ದಾನೆ. ಈ ವಿಷಯವನ್ನು ತಿಳಿಸಿದ್ದು ಇದನ್ನು ಪತ್ನಿ ಅತ್ತೆಯ ಮರಣ ಪ್ರಮಾಣ ಪತ್ರವನ್ನು ಮಾಡಿಸಿ ಮನೆಯಿಂದ ಹೊರಗೆ ಹಾಕಿದ್ದಾಳೆ. ಸೂಕ್ತ ತನಿಖೆ ನಡೆಸುವಂತೆ ಆದೇಶಿಸಿರುವ ಹೈಕೋರ್ಟ್ ಪ್ರಕರಣವನ್ನು ಮುಂದೂಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.