ಮೋಹನ್, ಮಾಳವಿಕಾ ಔಟ್! ಕೊನೆಗೂ ಗೆದ್ದೆ ಬಿಟ್ನಾ ಪ್ರಥಮ್..?

ಕಳೆದ 113 ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ ಕೊನೆ ಹಂತಕ್ಕೆ ಬಂದು ತಲುಪಿದೆ. ಯಾರು ಈ ಬಾರಿ ಬಿಗ್ ಬಾಸ್ ನ ಮನೆಯ ಯಜಮಾನನಾಗ್ತಾರೆ ಅನ್ನುವ ಪ್ರಶ್ನೆಗೆ ಇನ್ನು ಕೆಲವೇ ಕ್ಷಣಗಳಲ್ಲಿ ತೆರೆಬೀಳಲಿದೆ. ಇಂದಿನವರೆಗೂ ಟಫ್ ಕಾಂಪಿಟೇಷನ್ ಕೊಡುತ್ತಾ ಉಳಿದವರು ಮೋಹನ್ , ಮಾಳವಿಕಾ, ಕೀರ್ತಿ, ರೇಖಾ ಹಾಗೂ ಮೋಹನ್. ಆದ್ರೆ ಇಂದು ನಡೆದ ಗ್ರಾಂಡ್ ಫಿನಾಲೆಯ ಮೊದಲ ಭಾಗದಲ್ಲಿ ಮೋಹನ್ ಹಾಗೂ ಮಾಳವಿಕಾ ಮನೆಯಿಂದ ಹೊರಬಿದ್ದಿದ್ದಾರೆ. ಇರುವ ಮೂವರಲ್ಲಿ ಪಟ್ಟ ಗೆಲ್ಲುವರ್ಯಾರು ಅನ್ನೋದೆ ವೀಕ್ಷಕರನ್ನ ತುದಿಗಾಲಲಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ.

ಬಿಗ್ ಬಾಸ್ ಶುರುವಾದಾಗಿನಿಂದ ಮನೆಯಲ್ಲಿ ಕೊಂಚ ವಿಚಿತ್ರವಾಗಿ ಅಧಿಕ ಪ್ರಸಂಗಿಯಂತೆ ವರ್ತಿಸುತ್ತಾ ಸಾಕಷ್ಡು ಎಂಟರ್ ಟೈನ್ ಮಾಡಿದವನೆಂದ್ರೆ ಅದು ಪ್ರಥಮ್ ಮಾತ್ರ. ಮೊದ, ಮೊದಲು ಎಲ್ಲರಿಗೂ ದೊಡ್ಡ ತಲೆ ಹರಟೆಯಂತೆ ಕಂಡವನು ಇದೇ ಪ್ರಥಮ್. ಆದ್ರೆ ಯಾವಾಗ ಪ್ರಥಮ್ ನ ತಿಕ್ಕುಲುತನದ ಮಾತುಗಳೇ ವೀಕ್ಷಕರನ್ನ ಖುಷಿಪಡಿಸಲಾರಂಭಿಸಿದವೋ ಆಗ ಇಡೀ ಮನೆಯಲ್ಲಿ ಆತನ ಬಗ್ಗೆ ಒಲುವು ಹೆಚ್ಚಾಗಲಾರಭಿಸಿತು. ಮನೆಯಲ್ಲಿ ಇದ್ದ ಎಲ್ಲರನ್ನ ತನ್ನ ವಿಚಿತ್ರ ವರ್ತನೆಯಿಂದ ಕಾಡಿದ ಪ್ರಥಮ್ ಸಹಜವಾಗಿಯೇ ವೀಕ್ಷಕರಿಗೆ ವಿಚಿತ್ರವಾಗಿ ಕಾಣಿಸಲಾರಂಭಿಸಿದ್ದ. ಹೀಗಾಗಿ ಜನ ಕೂಡಾ ಆತನನ್ನ ತುಂಬಾ ಇಷ್ಟಪಡಲಾರಂಭಿಸಿದ್ರು. ದಿನಕಳೆದಂತೆ ಪ್ರಥಮ್ ಬಿಗ್ ಬಾಸ್ ಮನೆಯ ಟಫ್ ಕಾಂಪಿಟೇಟರ್ ಆದ. ಹೀಗಾಗಿ ಎಲ್ಲ ಪ್ರತಿಸ್ಪರ್ಧಿಗಳು ಆತನನ್ನ ನಾಮಿನೇಟ್ ಮಾಡಲಾರಂಭಿಸಿದ್ದರು.

ಆದ್ರೆ ವೀಕ್ಷಕರ ಹೃದಯ ಗೆದ್ದಿದ್ದ ಪ್ರಥಮ್ ಸಲೀಸಾಗಿಯೇ ಪ್ರತಿ ವಾರ ಬಚಾವಾಗುತ್ತಲೇ ಬಂದ. ಈಗ ಕೊನೆಯ ಮೂರರ ಹಂತಕ್ಕೆ ತಲುಪಿದ್ದಾನೆ. ಕನ್ನಡದ ಎಲ್ಲ ವೀಕ್ಷಕರ ಆಸೆಯೂ ಪ್ರಥಮ್ ವಿನ್ನರ್ ಆಗಲೆಬೇಕು ಅನ್ನೋದು.  ಒಂದು ಮೂಲದ ಪ್ರಕಾರ ಪ್ರಥಮ್ ಟೈಟಲ್ ಗೆದ್ದಿದ್ದಾನೆ ಅಂತಲೇ ಹೇಳಲಾಗುತ್ತೆ. ಆದ್ರೆ ಇನ್ನೂ ಕೆಲ ಲೆಕ್ಕಾಚಾರಗಳು ಪ್ರಥಮ್ ನನ್ನ ಗೆಲ್ಲಿಸುವ ಇರಾದೆ ಇಲ್ಲವೇ ಇಲ್ಲ ಅಂತ ಕೂಡಾ ಕೇಳಿ ಬರ್ತಿದೆ. ಪ್ರತಿ ಸೀಸನ್ ನಲ್ಲಿಯೂ ಉತ್ತಮವಾಗಿ ಆಡಿದ ಆಟಗಾರನೇ ರನ್ನರ್ ಅಪ್ ಆಗುತ್ತಿರುವುದು. ಹೀಗಾಗಿ ಈ ಬಾರಿಯೂ ಅದೇ ಇತಿಹಾಸ ಮರುಕಳಿಸುತ್ತೆ. ವೀಕ್ಷಕರು ಅಂದುಕೊಂಡ ಯಾರನ್ನೂ ಬಿಗ್ ಬಾಸ್ ಗೆಲ್ಲಿಸುವದಿಲ್ಲ ಅನ್ನೋ ವಾದ ಕೂಡಾ ಕೇಳಿ ಬರ್ತಿದೆ. ಒಂದು ವೇಳೆ ಈ ಲೆಕ್ಕಾಚಾರ ಬುಡಮೇಲಾಗಿ ವೀಕ್ಷಕರ ೊತ್ತಾಸೆಯೇ ಇಡೇರಲಿದೆಯಾ ಅನ್ನೋದು ಇನ್ನು ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ.

3 thoughts on “ಮೋಹನ್, ಮಾಳವಿಕಾ ಔಟ್! ಕೊನೆಗೂ ಗೆದ್ದೆ ಬಿಟ್ನಾ ಪ್ರಥಮ್..?

 • ಅಕ್ಟೋಬರ್ 20, 2017 at 11:41 ಅಪರಾಹ್ನ
  Permalink

  Amazing issues here. I am very happy to see your post.
  Thanks a lot and I am taking a look forward to touch you.
  Will you kindly drop me a e-mail?

 • ಅಕ್ಟೋಬರ್ 24, 2017 at 3:45 ಅಪರಾಹ್ನ
  Permalink

  I have to thank you for the efforts you’ve put in penning
  this website. I am hoping to view the same high-grade blog posts from you in the future as well.
  In fact, your creative writing abilities has encouraged
  me to get my own website now 😉

Comments are closed.