ಶಾಸಕರ ಕಾರು (ಬಾರು )…….! 10 ಕೋಟಿ ರೂ ನಷ್ಟ !

ಸಾರ್ವಜನಿಕರ ಹಣದಲ್ಲಿ ಶಾಸಕರು ಮೋಜು ಮಸ್ತಿ ಮಾಡ್ತಾರೆ ಅನ್ನೊ ಆರೋಪಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಶಾಸಕರ ಭವನದಲ್ಲಿ ಶಾಸಕರಿಗೆ ಬಾಡಿಗೆ ಮೂಲಕ ನೀಡುವ ಕಾರುಗಳ ಬಳಕೆಯಲ್ಲಿ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ನಷ್ಟವಾಗ್ತಿದೆ ಪ್ರತಿ ಕಿ.ಮೀ ಗೆ 7 ರೂ ದರದಲ್ಲಿ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆಯುವ ಶಾಸಕರಿಂದಾಗಿ ಕಳೆದ ಮೂರು ವರ್ಷದ ಅವಧಿಯಲ್ಲಿ ಬರೋಬ್ಬರಿ 10 ಕೋಟಿ ರೂ ನಷ್ಟವಾಗಿದೆ. ಶಾಸಕರ ಭವನದ ಕಾರುಗಳಿಂದ ಸರ್ಕಾರಕ್ಕೆ ಆಗಿರುವ ನಷ್ಟದ ಲೆಕ್ಕಾಚಾರ ಹಾಕಿದಾಗ ಸಿಗೋ ಉತ್ತರ ಶಾಕ್ ನೀಡುತ್ತದೆ.

Karnataka MLA Car

ಮಾಹಿತಿ ಹಕ್ಕಿನಡಿ ಪಡೆದುಕೊಂಡ ಮಾಹಿತಿಯಲ್ಲಿ ಬಹಿರಂಗಗೊಂಡ ವಿವರದ ಪ್ರಕಾರ, ಶಾಸಕರು ಬಾಡಿಗೆ ಮೂಲಕ ಪಡೆಯುವ ಕಾರುಗಳಿಂದಾಗಿ ರಾಜ್ಯ ಸರ್ಕಾರಕ್ಕೆ ಕಳೆದ ಮೂರು ವರ್ಷದ ಅವಧಿಯಲ್ಲಿ 10 ಕೋಟಿ ರೂ ನಷ್ಟವಾಗಿದೆ.

 • 3 ವರ್ಷದ ಅವಧಿಯಲ್ಲಿ ಕಾರುಗಳ ಖರೀದಿ, ನಿರ್ವಹಣೆಗಾಗಿ 11 ಕೋಟಿ ವೆಚ್ಚ.
 • ಪ್ರತಿ ಕಿ.ಮೀ ಗೆ 7 ರೂ ದರದಲ್ಲಿ ಬಾಡಿಗೆಯಲ್ಲಿ ಶಾಸಕರ ಬಳಕೆ.
 • ಬಂದ ಆದಾಯ ಕೇವಲ 1 ಕೋಟಿ 28 ಲಕ್ಷ 70 ಸಾವಿರ ರೂ ಮಾತ್ರ.
 • ಶಾಸಕರ ಭವನದಲ್ಲಿ 38 ಇನ್ನೋವಾ, 25 ಸ್ವಿಪ್ಟ್ ಡಿಸೈರ್, 10 ಅಂಬಾಸಿಡರ್,
 • 5 ಫಾರ್ಚೂನರ್ ಸೇರಿದಂತೆ 85 ವಾಹನಗಳು ಬಾಡಿಗೆಯಲ್ಲಿ ಸಂಚಾರ.
 • ಮಾರುಕಟ್ಟೆಯಲ್ಲಿ ಪ್ರತಿ ಕಿ.ಮೀ ಗೆ 15 ರಿಂದ 18 ರೂಪಾಯಿ
 • ಆದ್ರೆ ಶಾಸಕರಿಗೆ ಮಾತ್ರ ಕೇವಲ 7 ರೂಪಾಯಿಗೆ ಬಾಡಿಗೆಗೆ ಕಾರು.
 • 3 ವರ್ಷದ ಅವಧಿಯಲ್ಲಿ 10 ಕೋಟಿ ರೂ ನಷ್ಟ

ಸಿದ್ಧರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೂರು ವರ್ಷದ ಅವಧಿಯಲ್ಲಿ ಶಾಸಕರ ಭವನದ ಕಾರುಗಳ ಖರೀದಿ ಮತ್ತು ನಿರ್ವಹಣೆಗಾಗಿಯೇ ಬರೋಬ್ಬರಿ 11 ಕೋಟಿ 40 ಲಕ್ಷ 31 ಸಾವಿರ ರೂ ವೆಚ್ಚ ಮಾಡಲಾಗಿದೆ. ಆದರೆ ಈ ಕಾರುಗಳನ್ನು ಪ್ರತಿ ಕಿ.ಮೀ ಗೆ 7 ರೂ ದರದಲ್ಲಿ ಬಾಡಿಗೆಯಲ್ಲಿ ಶಾಸಕರು ಬಳಕೆ ಮಾಡಿದ್ದಾರೆ. ಇದ್ರಿಂದ ಬಂದ ಆದಾಯ ಕೇವಲ 1 ಕೋಟಿ 28 ಲಕ್ಷ 70 ಸಾವಿರ ರೂಪಾಯಿ ಮಾತ್ರ

ಇಷ್ಟಕ್ಕೂ ಶಾಸಕರ ಭವನದಲ್ಲಿ 38 ಇನ್ನೋವಾ, 25 ಸ್ವಿಪ್ಟ್ ಡಿಸೈರ್, 10 ಅಂಬಾಸಿಡರ್, 5 ಫಾರ್ಚೂನರ್ ಸೇರಿದಂತೆ 85 ವಾಹನಗಳು ಬಾಡಿಗೆಯಲ್ಲಿ ಸಂಚರಿಸುತ್ತವೆ. ನಮ್ಮ ಎಲ್ಲಾ ಶಾಸಕರು ಈ ಕಾರುಗಳನ್ನು ಕೇವಲ 7 ರೂ ಪ್ರತಿ ಕಿ.ಮೀ ದರದಲ್ಲಿ ಬಳಕೆ ಮಾಡ್ತಾರೆ. ಮಾರುಕಟ್ಟಯಲ್ಲಿ ಪ್ರತಿ ಕಿ.ಮೀ ಗೆ 15 ರಿಂದ 18 ರೂಪಾಯಿ ವ್ಯಯ ಮಾಡಬೇಕಾದ ಸ್ಥಿತಿ ಇರುವಾಗ ಶಾಸಕರ ಭವನದ ಕಾರುಗಳಿಗೆ ಮಾತ್ರ ಕೇವಲ 7 ರೂಪಾಯಿಗಳನ್ನು ಶಾಸಕರು ನೀಡ್ತಿದ್ದಾರೆ. ಇದ್ರಿಂದಾಗಿ ಮೂರು ವರ್ಷದ ಅವಧಿಯಲ್ಲಿ ಸರ್ಕಾರ 10 ಕೋಟಿ ರೂ ನಷ್ಟ ಅನುಭವಿಸಿದೆ.

LH Car 1

ಇಷ್ಟಕ್ಕೂ ಶಾಸಕರರ ಭವನದಲ್ಲಿ ಶಾಸಕರಿಗೆ ಕಾರು ನೀಡೋ ಸಲುವಾಗಿ ವೆಚ್ಚ ಮಾಡಿದ ಬಗ್ಗೆ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯಲ್ಲಿ ಸಂಪೂರ್ಣ ವಿವರ ಲಭ್ಯವಾಗಿದೆ.

 • 3 ವರ್ಷದ ಅವಧಿಯಲ್ಲಿ ಕಾರುಗಳ ಖರೀದಿ ಮತ್ತು ನಿರ್ವಹಣೆಯ ವಿವರ
 • ಕಾರುಗಳ ಖರೀದಿಗಾಗಿ 1,07,73,758 ರೂ
 • ಚಾಲಕರುಗಳ ವೇತನ, ಭತ್ಯೆಗಳಿಗಾಗಿ 7,86,27,098 ರೂ
 • ವಾಹನಗಳ ಇಂಧನಕ್ಕಾಗಿ 1,68,19,177 ರೂ
 • ರಿಪೇರಿ/ನಿರ್ವಹಣೆಗಾಗಿ 58,71,430 ರೂ
 • ಟ್ಯೂಬ್ ಹಾಗೂ ಟಯರ್ ಗಳಿಗಾಗಿ 16,37,420 ರೂ
 • ಬ್ಯಾಟರಿಗಳಿಗಾಗಿ 3,02,207 ರೂ
 • ಶಾಸಕರಿಂದ ಬಂದ ಆದಾಯ ಕೇವಲ 1,28,70,095 ರೂ

ಕಳೆದ ಮೂರು ವರ್ಷದ ಅವಧಿಯಲ್ಲಿ ಕಾರುಗಳ ಖರೀದಿಗಾಗಿ 1 ಕೋಟಿ 7 ಲಕ್ಷ 73 ಸಾವಿರದ 758 ರೂ ವೆಚ್ಚ ಮಾಡಲಾಗಿದೆ. ಈ ಕಾರುಗಳ ಚಾಲಕರುಗಳ ವೇತನ ಮತ್ತು ಭತ್ಯೆಗಾಗಿ 7 ಕೋಟಿ 86 ಲಕ್ಷ 27 ಸಾವಿರದ 98 ರೂ ಹಾಗೂ ಕಾರುಗಳ ಇಂಧನದ ವೆಚ್ಚಕ್ಕಾಗಿ 1 ಕೋಟಿ 68 ಲಕ್ಷ 19 ಸಾವಿರದ 177 ರೂ ವ್ಯಯವಾಗಿದೆ. ಆಶ್ಚರ್ಯವೆಂದ್ರೆ, ಖರೀದಿಸಿರುವ ಕಾರುಗಳ ರಿಪೇರಿ ಮತ್ತು ನಿರ್ವಹಣೆಗಾಗಿ 58 ಲಕ್ಷ 71 ಸಾವಿರದ 430 ರೂ, ಟ್ಯೂಬ್ ಮತ್ತು ಟಾಯರ್ ಗಾಗಿ 16 ಲಕ್ಷ 37 ಸಾವಿರದ 420 ರೂ ವೆಚ್ಚವಾಗಿದೆ. ಬ್ಯಾಟರಿಗಳಿಗಾಗಿ 3 ಲಕ್ಷ 2 ಸಾವಿರದ 207 ರೂ ವೆಚ್ಚ ಸೇರಿದಂತೆ ಬರೋಬ್ಬರಿ 11 ಕೋಟಿ 40 ಲಕ್ಷ 31 ಸಾವಿರದ 90 ರೂಪಾಯಿ ವೆಚ್ಚವಾಗಿದೆ.

ಆದ್ರೆ ಈ ಕಾರುಗಳನ್ನು ಬಳಸಿದ ಶಾಸಕರಿಂದ ಮೂರು ವರ್ಷಗಳಲ್ಲಿ ಕೇವಲ 1 ಕೋಟಿ 28 ಲಕ್ಷ 70 ಸಾವಿರದ 95 ರೂಪಾಯಿ ಮಾತ್ರ ಆದಾಯ ಬಂದಿದೆ.

2010 ರಲ್ಲಿ ನಿಗದಿಯಾಗಿದ್ದ ಬಾಡಿಗೆಯನ್ನೇ ಈಗಲೂ ಮುಂದುವರಿಸಲಾಗಿದೆ. ಶಾಸಕರ ವೇತನ ಮತ್ತು ಭತ್ಯೆಗಳನ್ನು 2010 ರಿಂದ 2016 ರ ಅವಧಿಯಲ್ಲಿ 2 ಬಾರಿ ಹೆಚ್ಚಳ ಮಾಡಲಾಗಿದೆ. ಶಾಸಕರು ತಮ್ಮ ಕ್ಷೇತ್ರದಿಂದ ಬೆಂಗಳೂರಿಗೆ ಬಂದ್ರೆ ಪ್ರತಿ ಕಿ.ಮೀ ಗೆ 30 ರೂ ಪ್ರಯಾಣ ಭತ್ಯೆ ಕ್ಲೈಮ್ ಮಾಡ್ಕೋಳ್ತಾರೆ. ಆದ್ರೆ ಸರ್ಕಾರದ ಕಾರಿಗೆ ಮಾತ್ರ ಕೇವಲ 7 ರೂ ಪ್ರತಿ ಕಿ.ಮೀ ಗೆ ನೀಡ್ತಾರೆ. ಹೀಗಾಗಿ ಈ ಬಗ್ಗೆ ಮಾರುಕಟ್ಟೆ ದರವನ್ನೇ ನಿಗದಿ ಮಾಡುವಂತೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಲು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿರ್ಮಾನಿಸಿದ್ದಾರೆ.

Comments are closed.