‘ಪಬ್ಲಿಕ್ಕಾ’ಯಿತೇ ಆ್ಯಂಬಿಡೆಂಟ್‍ನ ‘ರಂಗ್’ಬಿರಂಗಿ ಬುಲೆಟಿನ್?Mediaದ ಥರ್ಡ್ ರೇಟ್ ದಂಧೆಗಳು!

‘ಆ್ಯಂಬಿಡೆಂಟ್ ಪ್ರಕರಣದಲ್ಲಿ ನಮ್ಮದೇನೂ ಪಾತ್ರವಿಲ್ಲ. ಸುಮ್ಮಸುಮ್ಮನೇ ಕೆಲವು ಕಿಡಿಗೇಡಿಗಳು ನಮ್ಮ ಪಬ್ಲಿಕ್ ಚಾನೆಲ್, ಮುಖ್ಯಸ್ಥ ಎಚ್‍ಆರ್ ರಂಗನಾಥ, ಸಿಬ್ಬಂದಿ ಅಜ್ಮತ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಫೇಕ್‍ನ್ಯೂಸ್ ಹರಡುತ್ತಿದ್ದಾರೆ. ಇಂತಹವರನ್ನು ಪತ್ತೆಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಪಬ್ಲಿಕ್ ಟಿವಿ ಸ್ಪಷ್ಟನೆ ನೀಡಿದ ಕೂಡಲೇ ಸೋಷಿಯಲ್‍ಮೀಡಿಯಾ ಬಳಸದ ‘ಅಸಂಖ್ಯ’ ರಂಗಣ್ಣಾಭಿಮಾನಿಗಳು ಗಲಿಬಿಲಿಗೆ ಬಿದ್ದಿದ್ದಾರೆ.

‘ರಂಗಣ್ಣರ ಮೇಲೆ ಕಿಡಿಗೇಡಿಗಳು ಮಾಡಿರುವ ಸುಳ್ಳು ಆರೋಪವೇನು’ ಎಂದು ಈ ವೀಕ್ಷಕ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಇದೆಲ್ಲ ಗೊತ್ತೇ ಇರದ ಜನಸಾಮಾನ್ಯರಿಗೆ ‘ಏನೋ ಲಫಡಾ ನಡೆದಿದೆಯಾ’ ಎಂಬ ಸಂಶಯ ಬರುವಂತೆ ಮಾಡಿ, ಸುಮ್ಮನೆ ಇರುವೆ ಬಿಟ್ಟುಕೊಂಡಿತಲ್ಲ ನಮ್ಮ ಚಾನೆಲ್ ಎಂದು ಹಲವು ಜಿಲ್ಲಾ ವರದಿಗಾರರು ಪಬ್ಲಿಕ್ಕಾಗಿಯೇ ನಗಾಡುತ್ತಿದ್ದರಂತೆ.

ಗೊಂದಲದಲ್ಲಿರುವ ಪಬ್ಲಿಕ್‍ನ ವೀಕ್ಷಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಮಾಹಿತಿ ತಿಳಿಸುವುದು ನಮ್ಮ ವೃತ್ತಿಧರ್ಮ ಎಂದು ಬಗೆದು ಅದನ್ನು ಇಲ್ಲಿ ನಿರೂಪಿಸುವ ಯತ್ನ ಮಾಡಿದ್ದೇವೆ. (ಇಲ್ಲಿ ಪ್ರಿಂಟ್ ಮೀಡಿಯಾ ಓದುಗರಿಗೆ ಬೋರ್ ಆಗದಿರಲೆಂದು ನಿರೂಪಣೆಯಲ್ಲಿ ರೋಚಕತೆ ಇದ್ದರೆ ಅದನ್ನು ಟಿವಿ ಮೀಡಿಯಾ ಪ್ರಭಾವವೆಂದು ಬಗೆದು ಕ್ಷಮಿಸಬೇಕು)

‘ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರ್ ಮಿರರ್‍ನಲ್ಲಿ ಕ್ರೈಮ್ ಬೀಟ್‍ಗಳಲ್ಲಿ ಕೆಲಸ ಮಾಡುತ್ತಾ ಅಪರಾಧ ಲೋಕದ ಒಳಸುಳಿವುಗಳನ್ನು ಪತ್ತೆ ಹಚ್ಚುತ್ತಾ, ತಾನೇ ಕ್ರಿಮಿನಲ್ ಆಗಿಬಿಟ್ಟರೆಂಬ ವದಂತಿ (ಇದು ಈ ‘ಫೇಕ್‍ನ್ಯೂಸ್’ ಹೊರಬಂದ ಮೇಲೆ ಹುಟ್ಟಿಕೊಂಡ ಕಥೆಯೂ ಇರಬಹುದು!) ಅಜ್ಮತ್ ಎಂಬ ಪತ್ರಕರ್ತನ ಕುರಿತು ಇದೆ. ಈತನ ಬಗ್ಗೆ ಬೆಂಗಳೂರಿನ ರೌಡಿಗಳು, ದಂಧೆಕೋರರ ಬಳಿ ರಂಗುರಂಗಿನ ಕತೆಗಳಿವೆಯಂತೆ. ಕೆಲವು ಪೊಲೀಸ್ ಅಧಿಕಾರಿಗಳಗೂ ಈತನ ‘ಪವಾಡ’ಗಳು ಗೊತ್ತಂತೆ. ಆದರೆ ಇಂತಹ ಹಿನ್ನೆಲೆಯ ಅಜ್ಮತ್ ಹಿರಿಯ ಪತ್ರಕರ್ತ ರಂಗನಾಥರ ಪಬ್ಲಿಕ್ ಟಿವಿಯಲ್ಲಿದ್ದಾರೆ ಈಗ! ಪಾಪ, ರಂಗನಾಥರಿಗೆ ಈತನ ಹಿನ್ನೆಲೆ ತಿಳಿಯಲು ಟೈಮ್‍ಇರಲಿಲ್ಲವೆಂದೇ ಭಾವಿಸೋಣ.

ಅಜ್ಮತ್ ಸಂದರ್ಶ ಮಾಡುವಾಗ, ‘ ಈ ಕಾಲದಲ್ಲಿ ಚಾನೆಲ್ ನಡೆಸಲು ಎಷ್ಟು ದುಡ್ಡಾದರೂ ಸಾಲದು. ನಿನ್ನ ಟ್ಯಾಲೆಂಟನ್ನೆಲ್ಲ ಬಳಸಿ ತಿಂಗಳಿಗೆ 40 ಲಕ್ಷ ಆದಾಯ ತರಬೇಕು’ ಎಂದು ಅಜ್ಮತ್ ಮುಂದೆ ಚಾಲೆಂಜ್ ಇಡಲಾಗಿತು. ‘ಓಕೆ’ ಎಂದ ಅಜ್ಮತ್ ತನ್ನ ರಿಪೋರ್ಟಿಂಗ್ ಶುರು ಹಚ್ಚಿದ ಅಜ್ಮತ್‍ಗೆ ಆ್ಯಂಬಿಡೆಂಟ್‍ನ ಫರೀದ್ ಅಕ್ಷಯಾಪಾತ್ರೆಯಂತೆ ಕಂಡದ್ದು ಸಹಜವೇ ಆಗಿತ್ತು.

‘ಆ್ಯಂಬಿಡೆಂಟ್‍ನಿಂದ ಭಾರಿ ವಂಚನೆ’ ಎಂದು ಬ್ರೇಕಿಂಗ್ ನ್ಯೂಸ್ ಹೊಡೆದ ಅಜ್ಮತ್ ಅದನ್ನು ಫರೀದನಿಗೆ ವ್ಯಾಟ್ಸಪ್ ಮಾಡಿದ. ಕಂಗಾಲಾದ ಫರಿದ ಸುದ್ದಿ ನಿಲ್ಲಿಸುವಂತೆ ಅಂಗಲಾಚುತ್ತಾನೆ. ಆಗ ಡೀಲ್ ಮಾಸ್ಟರ್ ಅಜ್ಮತ್ 5 ಕೋಟಿಗೆ ಬೇಡಿಕೆ ಇಡುತ್ತಾನೆ. ಸಾವಿರ ಕೋಟಿಯ ಒಡೆಯ ಫರೀದ್‍ಗೆ 5 ಕೋಟಿ ಜುಜುಬಿ. ಮೊದಲು ಅಜ್ಮತ್ ಅಕೌಂಟಿಗೆ 3 ಕೋಟಿ ಆರ್‍ಟಿಜಿಎಸ್ ಮಾಡಿ ಸ್ವಲ್ಪ ನಿರಾಳನಾಗಿತ್ತಾನೆ. ಆಹಣವನ್ನು ಅಜ್ಮತ್ ಪಬ್ಲಿಕ್ ಕ್ಯಾಪ್ಟನ್‍ಗೆ ನೀಡುವುದೆಲ್ಲ ಪ್ರೈವೇಟ್ ಆಗಿ ನಡೆಯುತ್ತದೆ

ಇಂತಹ ಎಂಜಲು ನೆಕ್ಕುವುದರಲ್ಲಿ ‘ಸಮಯಪ್ರಜ್ಞೆ’ ಹೊಂದಿರುವ ಸಮಯ್ ಚಾನೆಲ್‍ನ ವಿಜಯ್ ತಾತಯ್ಯ ತಂದೂ ಒಂದು ಕೈಚಾಚಿ ಆಖಾಡಕ್ಕೆ ಇಳಿಯುತ್ತಾನೆ.. ತನ್ನ ನಿತ್ಯ ಕಾಯಕದಂತೆ….ಇದಕ್ಕೆ ವೀಣಾ ಎಂಬ ಡೀಲ್-ಡಾಲ್ ಸಾಥ್ ನೀಡುತ್ತಾಳೆ.40 ಕೋಟಿ ದೇಣಿಗೆ ನೀಡುವಂತೆ ಫರೀದ್‍ಗೆ ಪಾಪಿಗಳು ಬೇಡಿಕೆ ಇಡುತ್ತಾರೆ. 37 ಕೋಟಿ ವೈಟ್‍ಮನಿ, 3 ಕೋಟಿ ಬ್ಲ್ಯಾಕ್‍ಮನಿ (ಡಿಮಾನಿಟೇಷನ್‍ನಿಂದ ಕಪ್ಪು ಹಣಕ್ಕೆ ಕಡಿವಾಣ ಬಿತ್ತು, 3 ಲಕ್ಷ ಅಕ್ರಮ ಮತ್ತು ಫ್ಲೋಟಿಂಗ್ ಕಂಪನಿಗಳು ಮುಚ್ಚಿದವು ಎಂದು ಗಂಟಲು ಹರಿಯುವಂತೆ ಕಿರುಚುತ್ತಲೇ ಇರುವ ರಿ-‘ಪಬ್ಲಿಕ್’ ಗೋಸ್ವಾಮಿ ಮತ್ತಾತನ ‘ಆದರ್ಶ’ ನಾಯP ಇದನ್ನು ಗಮನಿಸಲಿ ಎಂದು ಕೋರಿಕೆ) ಸಂದಾಯಮಾಡುತ್ತಾನೆ ಫರೀದ್.

ಫರೀದ್‍ಸಾರ್ವಜನಿಕರ ಹಣ ಲೂಟಿ ಹೊಡೆದ, ‘ಪಬ್ಲಿಕ್’ ಫರೀದ್‍ನಿಂದದ ಒಂದಿಷ್ಟು (ಸಖತ್ತಾಗೇ) ಕಿತ್ತುಕೊಂಡಿತು!

ಜೈ ಪತ್ರಿಕೀದ್ಯಮ, ಜೈ ಜಾಗತಿಕರಣ, ಆರ್ಥಿಕ ಶಿಸ್ತು ತಂದು ಕಪ್ಪುಹಣಕ್ಕೆ ಕಡಿವಾಣ ಹಾಕಿದ ಚೌಕಿದಾರನಿಗೂ ಜೈಅನ್ನಲೇಬೇಕ್ಲವೇ?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.