#MeToo : ಅರ್ಜುನ್ ಸರ್ಜಾ ವಿರುದ್ಧ ಆರೋಪ – 7 ದಿನಗಳಲ್ಲಿ ಸಾಕ್ಷ್ಯ ನೀಡುವಂತೆ ಶೃತಿ ಹರಿಹರನ್ ಗೆ ಮುನಿರತ್ನ ಸೂಚನೆ

ಚಿತ್ರ ನಟ ಅರ್ಜುನ್ ಸರ್ಜಾ ಅವರ ವಿರುದ್ಧ #MeToo ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಗೆ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ ಪತ್ರ ಬರೆಯಲು ಮುಂದಾಗಿದ್ದು, 7 ದಿನಗಳ ಒಳಗಾಗಿ ಸಾಕ್ಷ್ಯ ಒದಗಿಸುವಂತೆ ಪತ್ರದಲ್ಲಿ ಸೂಚನೆ ನೀಡಿದ್ದಾರೆ. ಆರೋಪಗಳ ಕುರಿತಂತೆ 7 ದಿನಗಳ ಒಳಗಾಗಿ ಸಾಕ್ಷ್ಯಗಳ ದಾಖಲೆ ಸಲ್ಲಿಸುವಂತೆ ಶೃತಿ ಹರಿಹರನ್ ಗೆ ಮುನಿರತ್ನ ಸೂಚಿಸಿದ್ದಾರೆ.

Advertisement

‘ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷನಾಗಿ ನಾನು ಶ್ರುತಿ ಹರಿಹರನ್’ಗೆ ಪತ್ರ ಬರೆಯುತ್ತಿದ್ದೇನೆ. 7 ದಿನಗಳೊಳಗಾಗಿ ಆಕೆ ಉತ್ತರ ನೀಡಬೇಕು. ದಾಖಲೆಗಳನ್ನು ಒಂದು ವಾರದ ಒಳಗೆ ತಲುಪಿಸಬೇಕು. ಒಂದು ವೇಳೆ ಉತ್ತರ ನೀಡದೇ ಹೋದಲ್ಲಿ, ಆರೋಪ ಸುಳ್ಳು ಎಂದು ಭಾವಿಸಲಾಗುತ್ತದೆ. ಬಳಿಕ ನಮ್ಮ ಸಂಘದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆಂದು ‘ ಮುನಿರತ್ನ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.