‘ಸ್ನೇಹನೇ ಬೇರೆ ರಾಜಕೀಯನೇ ಬೇರೆ’ ಯತ್ನಾಳ್ ಗೆ ಎಂ.ಬಿ ಪಾಟೀಲ್ ಟಾಂಗ್

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಎಂ.ಬಿ ಪಾಟೀಲ್ ಕಾಂಗ್ರೆಸ್ ಬಿಟ್ಟು ಬಂದರೆ ಡಿಸಿಎಂ ಮಾಡ್ತೀವಿ ಎಂದು ಆಹ್ವಾನ ನೀಡಿದ್ದರು. ಈ ಹೇಳಿಕೆಗೆ ಗೃಹ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಗೃಹ ಸಚಿವ ಎಂಬಿ ಪಾಟೀಲ್ ‘ ನಾನು ಯಾರ ಮನೆ ಬಾಗಿಲು ತಟ್ಟಿಲ್ಲ’ ನಾನು ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆನೇ ಇಲ್ಲ. ಸ್ನೇಹ ಬೇರೆ ರಾಜಕೀಯನೇ ಬೇರೆ ಎಂದು ಯತ್ನಾಳ್ ಗೆ ಟಾಂಗ್ ಕೊಟ್ಟಿದ್ದಾರೆ.

ಕಾಮಗ್ರೆಸ್ ನಲ್ಲಿ ಬೆಳೆದಿದ್ದೇನೆ. ಮುನಿಸಿ ಸಹಜ. ಯತ್ನಾಳ ಸ್ವಾಗತಿಸಿದ್ದಕ್ಕೆ ಅಭಿನಂದನೆ. ಆದರೆ ನಾನು ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇತ್ತ ಬಿಜೆಪಿ ಸಂಸದ ಪ್ರಭಾಕರ್ ಕೋರೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಎಂ.ಬಿ ಪಾಟೀಲ್ ಅವರನ್ನು ಬಿಜೆಪಿಗೆ ಸ್ವಾಗತಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.’ ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಬಿಜೆಪಿಗೆ ಯಾಕ್ ಬರುತ್ತಾರೆ..? ರಾಜ್ಯಧ್ಯಕ್ಷರ ಹುದ್ದೆನೇ ಇನ್ನೂ ಖಾಲಿಯಾಗಿಲ್ಲ. ಇನ್ನೂ ಇವರೆಲ್ಲಾ ಯಾಕೆ ಈ ರೀತಿ ಹೇಳಿಕೊಂಡು ಓಡಾಡುತ್ತಿದ್ದಾರೆ ಗೊತ್ತಿಲ್ಲಾ’ ಎಂದು ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.