ಬೆಂಗಳೂರು ಐಟಿ ಕಚೇರಿ ಎದುರು ಬೃಹತ್ ಪ್ರತಿಭಟನೆ : ದಾಳಿ ಖಂಡಿಸಿ ದಳಪತಿಗಳಿಂದ ಧರಣಿ

ಬೆಂಗಳೂರು ಐಟಿ ಕಚೇರಿ ಎದುರು ದಳಪತಿಗಳ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ. ಮಂಡ್ಯ, ಹಾಸನ, ಶಿವಮೊಗ್ಗ, ಮೈಸೂರು ಹೀಗೆ ಕೆಲ ಕಡೆ ಜಿಡಿಎಸ್ ಆಪ್ತರ ಮೇಲೆ ಐಟಿ ದಾಳಿಯನ್ನು ಖಂಡಿಸಿ ದೋಸ್ತಿಗಳು ಧರಣಿ ನಡೆಸಿದ್ದಾರೆ.

ಚೌಕಿದಾರ್ ಚೋರ್ ಹೈ.. ನರೇಂದ್ರ ಮೋದಿ ಹಟಾವೋ.. ಭಾರತ ಬಚಾವೋ.. ಚೌಕಿದಾರ್ ಡೌನ್ ಡೌನ್.. ಬಿಜೆಪಿ ಡೌನ್.. ಡೌನ್.. ಐಟಿ ಅಧಿಕಾರಿಗಳಿಗೆ ಧಿಕ್ಕಾರ.. ತೊಲಗಲಿ ತೊಲಗಲಿ ಮೋದಿ ಸರ್ಕಾರ ತೊಲಗಲಿ ..ಎಂದು ಐಟಿ ಇಲಾಖೆ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ.

ಸಿಎಂ ಕುಮಾರಸ್ವಾಮಿ, ರಾಮಲಿಂಗಾರೆಡ್ಡಿ, ದೇವೇಗೌಡರು, ದಿನೇಶ್ ಗುಂಡೂರಾವ್ ಹೀಗೆ ಕಾಂಗ್ರೆಸ್- ಜೆಡಿಎಸ್ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಕೆಲ ಸಮಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಐಟಿ ಇಲಾಖೆ ಮಾತ್ರ ನಾವು ಯಾರನ್ನು ಶಾಸಕರು, ಸಂಸದರನ್ನು ಟಾರ್ಗೆಟ್ ಮಾಡಿಲ್ಲ ಎಂದಿದೆ. ಆದರೂ ದಳಪತಿಗಳು ಹೇಳುವ ಪ್ರಕಾರ ತಮ್ಮ ಆಪ್ತರ ಮೇಲೆ ರೇಡ್ ಆಗಿದೆ, ಅವರನ್ನು ಹೆದರಿಸಲು, ಅವರ ಪ್ರಚಾರಕ್ಕೆ ಅಡ್ಡಿ ಮಾಡಲು, ಚುನಾವಣೆಗೆ ಅಡೆ ತಡೆ ಉಂಟುಮಾಡಲು ಈ ರೇಡ್ ಮಾಡಾಗಿದೆ ಎಂದು ಆರೋಪಿಸುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ದಾಳಿ ಎಂದು ದೋಸ್ತಿ ದೂರುತ್ತಿದೆ. ದಾಳಿ ಪಟ್ಟಿ ಮೊದಲೇ ಕೇಂದ್ರದಿಂದ ರೆಡಿಯಾಗಿದೆ. ಆನಂತರ ರೇಡ್ ಮಾಡಲಾಗಿದೆ ಎಂದು ದೋಸ್ತಿ ದೂರುತ್ತಿದೆ.

ಇನ್ನೂ ಕೆಲವೇ ಸಮಯದಲ್ಲಿ ಪ್ರತಿಭಟನೆ ಕಾವೇರುವ ಸಾಧ್ಯತೆ ಇದೆ.

 

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.