ಮೇ.29ಕ್ಕೆ ಮಂಡ್ಯದಲ್ಲಿ ಅಮ್ಮನ ಬೃಹತ್ ಸಮಾವೇಶ : ಜನತೆಗೆ ಕೃತಜ್ಞತೆ ಸಲ್ಲಿಸಿ ಸಂಭ್ರಮ..

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮೇ 19 ಕ್ಕೆ ಬೃಹತ್ ಸಮಾವೇಶ್ ಹಮ್ಮಿಕೊಂಡಿದ್ದಾರೆ. ಆ ಮೂಲಕ ಮಂಡ್ಯದ ಜನತೆಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.

ಇಂದು ಅಂಬರೀಶ್ ಅವರು ನಿಧನರಾಗಿ 6 ತಿಂಗಳು ಕಳೆದಿವೆ. ಪ್ರತೀ ತಿಂಗಳೂ 24 ರಂದು ಕಂಠೀರವ ಸ್ಟೆಡಿಯಂಗೆ ಆಗಮಿಸಿ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದ ಸುಮಲತಾ ಇಂದೂ ಕೂಡ ಭೇಟಿ ನೀಡಿ ಪೂಜೆ ಸಲ್ಲಿಸಿ ಭಾವುಕರಾದರು.

ಈ ವೇಳೆ ಮಾದ್ಯಮದೊಂದಿಗೆ ಮಾತನಾಡಿದ ನೂತನ ಸಂಸದರಾದ ಸುಮಲತಾ ಅವರು ‘ 29 ಬೃಹತ್ ಸಮಾವೇಶ್ ಇರುತ್ತೆ.. ಮಂಡ್ಯದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಾಂಗ್ರೆಸ್ ನಾಯಕರಿಗೆ ಟಿಕೇಟ್ ನೀಡಲು ಕೇಳಿಕೊಂಡಿದ್ದೆ ನಾನು ಆದರೆ ಟಿಕೆಟ್ ಕೊಟ್ಟಿರಲಿಲ್ಲ.  ಒಂದದು ವೇಳೆ ಕೊಟ್ಟಿದ್ದರೆ ಇಷ್ಟೆಲ್ಲಾ ಕಷ್ಟ ಪಡಬೇಕಾಗಿರಲಿಲ್ಲ. ಾದರೆ ಫಲಿತಾಂಶ ಮಾತ್ರ ಭರ್ಜರಿಯಾಗಿ ಕೊಟ್ಟಿದ್ದಾರೆ ಮಂಡ್ಯದ ಜನ’ ಎಂದಿದ್ದಾರೆ.

ಬಿಜೆಪಿಗೆ ಇಷ್ಟು ಸ್ಥಾನ ಬರುತ್ತೆ ಅಂತ ನಿರೀಕ್ಷೆ ಇರಲಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡುತ್ತೆ ಅನ್ನೋ ನಂಬಿಕೆ ಇತ್ತು ಆದರೆ ಇಷ್ಟು ಸ್ಥಾನ ಬರುವುದು ಗೊತ್ತಿರಲಿಲ್ಲ. ಒಂದು ಸುನಾಮಿ ಅಲ್ಲ 10 ಸುನಾಮಿ ಒಟ್ಟಿಗೆ ಬಂದಹಾಗೆ ನಿನ್ನೆ ಆಗಿದೆ ಎಂದು ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದ್ದಾರೆ.

ಮಂಡ್ಯದ ಜನ ನನ್ನ ಮೇಲೆ ಅಸೂಯೆ ಇರುವವರಿಗೆ ಪಾಠ ಕಲಿಸಿದ್ದಾರೆ. ಇದು ನನ್ನ ಗೆಲವು ಅಲ್ಲ, ಅಂಬರೀಶ್ ಗೆಲುವು,  ದೇಶದ, ಸ್ವಾಭಿಮಾನದ ಗೆಲುವು ಎಂದಿದ್ದಾರೆ.

ದೋಸ್ತಿಗಳ ಸೋಲಿನ ಬಗ್ಗೆ ಮಾತನಾಡಿದ ಸುಮಲತಾ ‘ಎಷ್ಟೇ ಹಣ ಚೆಲ್ಲಿದರೂ ಜನ ನನ್ನ ಕೈ ಬಿಡಲಿಲ್ಲ. ‘ನೆಗೆಟಿವ್ ರಾಜಕಾರಣಕ್ಕೆ ಜನರೇ ಪಾಠ ಕಲಿಸಿದ್ದಾರೆ’ ಎಂದರು.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.