ತಾಯಿಯಾಗಲಿರುವ ಮಾರ್ಟಿನಾ ಹಿಂಗಿಸ್ : ಟ್ವಿಟರ್‌ನಲ್ಲಿ ಸಂತಸ ಹಂಚಿಕೊಂಡ ಟೆನಿಸ್ ತಾರೆ

ಖ್ಯಾತ ಟೆನಿಸ್ ತಾರೆ ಮಾರ್ಟಿನಾ ಹಿಂಗಿಸ್ ಮಂಗಳವಾರ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜನ್ಮದಿನಂದಂದು ಟ್ವೀಟ್ ಮಾಡಿರುವ ಮಾರ್ಟಿನಾ ಹಿಂಗಿಸ್, ತಾವು ತಾಯಿಯಾಗಲಿರುವ ವಿಷಯವನ್ನು ಬಹಿರಂಗಪಡಿಸಿ ಸಂತಸ ಹಂಚಿಕೊಂಡಿದ್ದಾರೆ.

ಟೆನಿಸ್ ರ್ಯಾಕೆಟ್ ಹಾಗೂ ಟೆನಿಸ್ ಆಟಗಾರರು ಧರಿಸುವ ಪುಟ್ಟ ಉಡುಗೆ ಅಕ್ಕಪಕ್ಕದಲ್ಲಿರುವ ಚಿತ್ರವನ್ನು ಮಾರ್ಟಿನಾ ಹಿಂಗಿಸ್ ಮಂಗಳವಾರ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ ಜನ್ಮದಿನದ ಶುಭಾಶಯ ಕೋರಿದವರಿಗೆ ಧನ್ಯವಾದಗಳು. ನಾನು ಮತ್ತು ನನ್ನ ಪತಿ ಜೋಡಿಯಾಗಿ ಕೊನೆಯ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಶೀಘ್ರದಲ್ಲಿಯೇ ನಮ್ಮದು ಮೂವರನ್ನೊಳಗೊಂಡ ಫ್ಯಾಮಿಲಿ ಆಗಲಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ ‘ ಎಂದು ಹಿಂಗಿಸ್ ತಿಳಿಸಿದ್ದಾರೆ.

ಮಾರ್ಟಿನಾ ಹಿಂಗಿಸ್ ಅತೀ ಚಿಕ್ಕ ವಯಸ್ಸಿನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಜಯಿಸಿದ ಹಾಗೂ ವಿಶ್ವ ನಂಬರ್ – 1 ಪಟ್ಟಕ್ಕೇರಿದ ಆಟಗಾರ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.