ಎರಡು ಮರಗಳಿಗೆ ಮದ್ವೆ : ಅನನ್ಯ ವಿವಾಹದ ಜೋಡಿಗೆ ಆಶೀರ್ವದಿಸಲು ಬಂದ ಜನ ಸಾಗರ

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಿಂದ 20 ಕಿಲೋಮೀಟರ್ ದೂರದಲ್ಲಿರುವ ಸೋಡೆಪುರದಲ್ಲಿ ಬುಧವಾರ ಅನನ್ಯ ಮದುವೆಯೊಂದು ನಡೆದಿದೆ. ಮಂಗಳವಾದ್ಯದ ಜೊತೆ ಅಪ್ರಾಪ್ತರ ಮದುವೆ ನಡೆಯಿತು. ಆದ್ರೆ ಮದುವೆ ತಡೆಯುವ ಬದಲು 2 ಸಾವಿರಕ್ಕೂ ಹೆಚ್ಚು ಮಂದಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

12 ವರ್ಷದ ಪ್ರಣಯ್ ಮನೆ ಬಿಟ್ಟಿಲ್ಲ. ಇದು ಹುಟ್ಟಿದ ಎರಡು ವರ್ಷಗಳ ನಂತ್ರ ಜನಿಸಿದ ದೇಬರಾತಿ ಮಧ್ಯೆ ಹೊಂದಾಣಿಕೆಯಿದೆ. ಹಾಗಾಗಿ ಅವರಿಬ್ಬರ ಮಧ್ಯೆ ವಿವಾಹ ಮಾಡಲಾಗಿದೆ. ಅಷ್ಟಕ್ಕೂ ಪ್ರಣಯ್ ಹಾಗೂ ದೇಬರಾತಿ ಮನುಷ್ಯರಲ್ಲ. ಎರಡು ಮರಗಳು.

ಪ್ರಣಯ್ ನನ್ನು ದತ್ತು ಪಡೆದ ಸೋಮಾ ನಾಗ್, ಮದುವೆಗೆ 2 ಸಾವಿರ ಮಂದಿಗೆ ಆಮಂತ್ರಣ ಪತ್ರಿಕೆ ನೀಡಿದ್ದರು.ಪ್ರಣಯ್, ದೋತಿ, ಕುರ್ತಾ ಧರಿಸಿದ್ದರೆ, ದೇಬರಾತಿ ಸೀರೆಯುಟ್ಟಿದ್ದಳು. ಇಬ್ಬರ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯ್ತು. ಶಂಖ ಮೊಳಗ್ತು, ಪೂಜಾರಿಗಳು ಮಂತ್ರ ಹೇಳಿದ್ರು. ಮದುವೆಗೆ ಬಂದವರು ನವ ವಿವಾಹಿತರ ಜೊತೆ ನಿಂತು ಸೆಲ್ಫಿ ತೆಗೆಸಿಕೊಂಡಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.