ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ʼಪುಟ್ಟ ಗೌರಿ ಮದುವೆ’ ಖ್ಯಾತಿಯ ಮಹೇಶ್

ʼಪುಟ್ಟ ಗೌರಿʼ ಮದುವೆ ಖ್ಯಾತಿಯ ಮಹೇಶ್ ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ. ಪುಟ್ಟಗೌರಿ ಮದುವೆಯಲ್ಲಿ ಮಹೇಶ್‍ನ ಪಾತ್ರ ಮಾಡಿ ಜನರ ಮನ ಗೆದ್ದಿದ್ದ ರಕ್ಷ್‍, ಇದೇ 26 ರಂದು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ.

ಇನ್ಸ್ಟಾಗ್ರಾಂ ನಲ್ಲಿ ನಟ ರಕ್ಷ್‍ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಾಕಿ “ನಾನು ಮದುವೆಯಾಗುತ್ತಿದ್ದೇನೆ. ನನ್ನ ಪ್ರೀತಿಯ ಜನರಿಗೆ ಇದು ನನ್ನ ಆಮಂತ್ರಣ ಪ್ರತಿಕೆಯಾಗಿದೆ. ಇದೇ ತಿಂಗಳು ದಿನಾಂಕ 26 ರಂದು ವಿವಾಹವಿದೆ. ನೀವೆಲ್ಲರೂ ಬಂದು ಆಶೀರ್ವದಿಸಬೇಕು” ಅಂತಾ ಬರೆದುಕೊಂಡಿದ್ದಾರೆ.

ಬೆಂಗಳೂರು ಅರಮನೆ ಮೈದಾನದ ಶೀಶ್ ಮಹಲ್‍ನಲ್ಲಿ ರಕ್ಷ್‍ ಮದುವೆ ನಡೆಯಲಿದೆ. ರಕ್ಷ್‍, ಹುಡುಗಿ ಹೆಸರು ಅನುಷಾ ಎಂದು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.