‘ಹಸು ಕರು ಹಾಕುತ್ತೆ.. 10 ದಿನ ಕರಕ್ಕೆ ಏನಾಕಬೇಕು ಅಂತ ಹೇಳಿ ಬಿಡಲಿ ಸಾಕು’ ದರ್ಶನ್ ಸವಾಲ್

ಅವರಿಗೇನು ಗೊತ್ತು ರೈತರ ಬಗ್ಗೆ..? ರೈತರ ಸಮಸ್ಯೆಗಳ ಬಗ್ಗೆ ಅರ್ಥ ಆಗೋದಿಲ್ಲ. ಅವರಿಗೇನು ಗೊತ್ತು ಬಿಸಿಲ ಬಗ್ಗೆ ಛತ್ರಿ ಹಿಡಿದುಕೊಂಡು ಸಿನಿಮಾ ಮಾಡ್ತಾರೆ ಎಂದು ಮಂಡ್ಯ ವುಡ್ ಬಗ್ಗೆ ಮಾತನಾಡಿದ್ದ ಸಿಎಂಗೆ ದರ್ಶನ್ ಸವಾಲಾಕಿದ್ದಾರೆ.

ಲೋಕಸಭಾ ಚುನಾವಣೆ ಬಹುರಂತ ಪ್ರಚಾರಕ್ಕೆ ಇದೇ ಕೊನೆ ದಿನ. ಮಂಡ್ಯದಲ್ಲಿ ಮದರ್ ಇಂಡಿಯಾ ಸುಮಲತಾ ಪರ ಪ್ರಚಾರಕ್ಕಿಳಿದ ದರ್ಶನ್ ಹಾಗೂ ಯಶ್ ಸಿಲ್ವರ್ ಜುಬಿಲಿ ಪಾರ್ಕ್ ನಲ್ಲಿ ಸ್ವಾಭಿಮಾನದ ಸಮ್ಮಿಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಈ ಸಮಾವೇಶದಲ್ಲಿ ಹೆಚ್ಚು ಕಡಿಮೆ ಇಡೀ ಮಂಡ್ಯದ ಜನ ಸೇರಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್  ‘ಹಸು ಕರು ಹಾಕುತ್ತೆ.. 10 ದಿನ ಕರಕ್ಕೆ ಏನಾಕಬೇಕು ಅಂತ ಹೇಳಿ ಬಿಡಲಿ ಸಾಕು’  ಅವರಿಗೆ ರೈತರ ಬಗ್ಗೆ ಎಷ್ಟು ಗೊತ್ತು ಅನ್ನೋದರ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತೆ ಎಂದು ಸವಾಲ್ ಹಾಕಿದ್ದಾರೆ.

ಕೋಟಿ ಖರ್ಚ್ ಮಾಡಿ ಪುತ್ರನ ಸಿನಿಮಾ ಮಾಡಿದ್ರು. ಅವರು ಸಿನಮಾದವರು ಅಲ್ವಾ..? ಆ ಕೋಟಿಲಿ ಮಂಡ್ಯಕ್ಕೆ ಏನಾದ್ರು ಮಾಡಿದ್ರೆ ಅವರು ಪ್ರಚಾರಕ್ಕೆ ಬರೋದು ಬೇಡವಾಗಿತ್ತು. ಜನಕ್ಕೆ ತಾವೇನು ಮಾಡಿದ್ದೀರಾ ಅನ್ನೋದು ಗೊತ್ತಾಗಿರೋದು.

ನಾನ್ ಸಹಾಯ ಮಾಡಿದರೆ ನನ್ನ ಸ್ವಂತ ದುಡ್ಡಲ್ಲಿ ಸಹಾಯ ಮಾಡ್ತೀನಿ. ವರ್ಷಕ್ಕೆ ನಾನಗೂ ಕೋಟಿ ಹಣ ಬೇಕು. ಯಾಕೆಂದರೆ ದಿನ ಬೆಳಗಾದರೆ ಸ್ಕೂಲ್ ಹೋಗೋರಿಂದ ಹಿಡಿದು ಡಾಕ್ಟರ್ ವರೆಗೂ ಸಹಾಯಕ್ಕೆ ಮನೆ ಮುಂದೆ ಬರುತ್ತಾರೆ. ಅವರಿಗೆಲ್ಲಾ ನಾನು ನನ್ನ ಸ್ವಂತ ದುಡಿಮೆಲಿ ಸಹಾಯ ಮಾಡ್ತೀನಿ. ಯಾರಿಂದ ಬಂದ ಹಣ ಅಲ್ಲಾ ಎಂದು ದರ್ಶನ ಸಿಎಂ ಹಾಗೂ ಪುತ್ರನಿಗೆ ಟಾಂಗ್ ಕೊಟ್ಟಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.