ಜನ್ಮದಿನದ ಶುಭಾಶಯ ಕೋರಿದ್ದೇ ಕೊನೇ.. – ಅಗಲಿದ ಪರಿಕ್ಕರ್ ಅವರ ಕೊನೆಯ ಟ್ವೀಟ್ 

ಜೀವನ್ಮರಣ ಹೋರಾಟ ನಡೆಸುತ್ತಲೇ ಕರ್ತವ್ಯ ನಿಭಾಯಿಸಿದ್ದ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಭಾನುವಾರ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಅವರ ಜೀವಂತಿಕೆಯ ಸಂಕೇತವಾಗಿ ಅವರ ಟ್ವಿಟರ್ ಖಾತೆಯಲ್ಲಿ ಜನ್ಮದಿನದ ಶುಭಾಶಯವೊಂದು ಅವರು ಕಟ್ಟಕಡೆಯ ಟ್ವೀಟ್ ಆಗಿ ಉಳಿದುಕೊಂಡಿದೆ.
ಟ್ವಿಟರ್‍ನಲ್ಲಿ ಕ್ರಿಯಾಶೀಲರಾಗಿದ್ದ ಮನೋಹರ್ ಪರಿಕ್ಕರ್ ಅವರು ಗೋವಾದ ಮೊದಲ ಮುಖ್ಯಮಂತ್ರಿ ದಯಾನಂದ್ (ಭಾವುಸಾಹೇಬ್) ಬಂಡೋಡ್ಕರ್ ಅವರ ಜನ್ಮದಿನಾಚರಣೆಗೆ ಶುಭಕೋರಿದ್ದೇ ಕೊನೇ, ಆ ಬಳಿಕ ಅವರು ಯಾವುದೇ ಟ್ವೀಟ್ ಮಾಡಿರಲಿಲ್ಲ.
ಮಾ. 12ರ ಬೆಳಗ್ಗೆ 8.39ಕ್ಕೆ ಟ್ವೀಟ್ ಮಾಡಿದ್ದ ಅವರು, ಗೋವಾದ ಅಭಿವೃದ್ಧಿಗೆ ಸದೃಢ ಅಡಿಪಾಯ ಹಾಕುವಲ್ಲಿ ನಿಮ್ಮ ಅಮೂಲ್ಯ ಕೊಡುಗೆಯನ್ನು ನಾವು ಸ್ಮರಿಸಿಕೊಳ್ಳುತ್ತಿದ್ದೇವೆ ಎಂದು ಬಂಡೋಡ್ಕರ್ ಕುರಿತು ಶುಭಾಶಯ ಕೋರಿದ್ದರು. ಮನೋಹರ್ ಪರಿಕ್ಕರ್ ಅವರು ನರೇಂದ್ರ ಮೋದಿಯವರ ಸರ್ಕಾರದಲ್ಲಿ ರಕ್ಷಣಾ ಮಂತ್ರಿ ಆಗಿಯೂ ಉತ್ತಮ ಸೇವೆ ಸಲ್ಲಿಸಿ ಜನರ ಮೆಚ್ಚುಗೆ ಗಳಿಸಿದ್ದರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.