ಜನರನ್ನು ಕೆಡಿಸಿದ್ದೇ ನಮ್ಮಂತ ರಾಜಕಾರಣಿಗಳು ಎಂದ ಕಾಂಗ್ರೆಸ್‌ ನಾಯಕ !

ಕೊಪ್ಪಳ : ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅಧಿಕಾರಿಗಳ ವಿರುದ್ದ ಉಡಾಫೆ ಹೇಳಿಕೆ ನೀಡಿದ್ದಾರೆ. ಐ.ಎ.ಎಸ್. ಐ.ಪಿ.ಎಸ್.ಅಧಿಕಾರಿಗಳ ವರ್ಗಾವಣೆ ಹಿನ್ನಲೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ದೊಡ್ಡವರಲ್ಲ, ಸರ್ಕಾರ ಹಾಕಿದಲ್ಲಿ ಹೋಗಬೇಕು. ಅಧಿಕಾರಿಗಳೇನು ಮೇಲಿಂದ ಬಂದವರಾ ಎಂದು ಪ್ರಶ್ನಿಸಿದ್ದಾರೆ.


ಅಧಿಕಾರಿಗಳನ್ನ ಸುಮ್ಮನೆ ನೀವು ಹೀರೋ ಮಾಡ್ತಿದ್ದೀರಾ ಎಂದಿರುವ ರಾಯರೆಡ್ಡಿ, ಸರ್ಕಾರಕ್ಕಿಂತ ಅಧಿಕಾರಿಗಳೇನು ದೊಡ್ಡವರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಒಂಬತ್ತು ತಿಂಗಳಲ್ಲ, ಸರ್ಕಾರ ಆದೇಶ ಮಾಡಿದ್ರೆ 9 ದಿನದಲ್ಲೆ ವರ್ಗಾವಣೆಯಾಗಬೇಕು. ಈ ಬಾರಿ ಚುಣಾವಣೆಯಲ್ಲಿ ಜಾತಿ ನಮ್ಮ ಕ್ಷೇತ್ರದಲ್ಲಿ ನಡೆಯೋದಿಲ್ಲ. ಜನರನ್ನ ಕೆಡಿಸಿದ್ದೇ ನಮ್ಮಂತ ರಾಜಕಾರಣಿಗಳು ಎಂದಿದ್ದಾರೆ.
ಜನರನ್ನ ಭ್ರಷ್ಟ ಮಾಡಿದ್ದು ರಾಜಕೀಯ ಪಕ್ಷಗಳು.ಜನ ಏನೂ ಹಣ,ಜಾತಿ ಕೇಳಲ್ಲ. ನಾವು ಹೋಗಿ ಅವರಿಗೆ ಜಾತಿ, ಹಣ ಕೊಡ್ತೀವಿ ಎಂದು ವಿವಾದ ಸೃಷ್ಠಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.