2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾದ ಅಭಿಜಿತ್ ಬ್ಯಾನರ್ಜಿ…

ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಪ್ಲೊ ಹಾಗೂ ಮಿಶಲ್ ಕ್ರೀಮರ್ ಅವರು 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜಾಗತಿಕ ಬಡತನವನ್ನು ಹೋಗಲಾಡಿಸುವ ಪ್ರಾಯೋಗಿಕ ವಿಧಾನ ಮಂಡಿಸಿದ್ದ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಮೂವರು ಅರ್ಥಶಾಸ್ತ್ರಜ್ಞರಿಗೆ ಈ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಲಭಿಸಿದೆ.

“2019ರ ಅರ್ಥಶಾಸ್ತ್ರ ನೊಬೆಲ್ ವಿಜೇತರು ನಡೆಸಿದ ಸಂಶೋಧನೆಯು ಜಾಗತಿಕ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಕೇವಲ ಎರಡು ದಶಕಗಳಲ್ಲಿ, ಅವರ ಹೊಸ ಪ್ರಯೋಗ ಆಧರಿಸಿದ ವಿಧಾನವು ವು ಅಭಿವೃದ್ಧಿ ಅರ್ಥಶಾಸ್ತ್ರದ ಕಲ್ಪನೆಯನ್ನು ಬದಲಿಸಿದೆ.ಇದೀಗ ಆ ಕ್ಷೇತ್ರ ಮತ್ತಷ್ಟು ಬೆಳವಣಿಗೆ ಸಾಧಿಸುವತ್ತ ಹೊರಟಿದೆ.” ನೊಬೆಲ್ ಆಯ್ಕೆ ಸಮಿತಿ ಹೇಳಿಕೆ ತಿಳಿಸಿದೆ.

“ಜಾಗತಿಕ ಬಡತನದ ವಿರುದ್ಧ ಹೋರಾಡುವ ಅತ್ಯುತ್ತಮ ಮಾರ್ಗಗಳ ಬಗ್ಗೆ ವಿಶ್ವಾಸಾರ್ಹ ಉತ್ತರಗಳನ್ನು ಪಡೆಯಲು ಈ ವರ್ಷದ ಪ್ರಶಸ್ತಿ ವಿಜೇತರು ಹೊಸ ವಿಧಾನವನ್ನು ಪರಿಚಯಿಸಿದ್ದಾರೆ. ಇದು ಈ ಸಮಸ್ಯೆಯನ್ನುಸಣ್ಣ,ಮತ್ತು ಹೆಚ್ಚು ಸುಕ್ಷೇಮವಾಗಿ ನಿರ್ವಹಿಸಬಹುದಾದ ಪ್ರಶ್ನೆಗಳಾಗಿ ವಿಂಗಡಿಸುತ್ತದೆ – ಉದಾಹರಣೆಗೆ, ಮಕ್ಕಳ ಆರೋಗ್ಯವನ್ನು ಸುಧಾರಿಸುವ ಅತ್ಯಂತ ಪರಿಣಾಮಕಾರಿ ಮಧ್ಯಸ್ಥಿಕೆ” ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಡೆಯುತ್ತಿರುವ ಭಾರತೀಯರ ಪೈಕಿ ಅಭಿಜಿತ್ ಬ್ಯಾನರ್ಜಿ ಎರಡನೆಯವರಾಗಿದ್ದಾರೆ. ಈ ಹಿಂದೆ ಅಮರ್ತ್ಯ ಸೇನ್ ಅವರಿಗೆ 1998ರ ವರ್ಷದ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಅವರು ಮಾನವ ಕಲ್ಯಾಣ ಅರ್ಥಶಾಸ್ತ್ರ ಮತ್ತು ಸಾಮಾಜಿಕ ಆಯ್ಕೆಗಳ ಪ್ರತಿಪಾದನೆಗಳಲ್ಲಿ ಮಾಡಿರುವ ಮಹತ್ವದ ಕೆಲಸಕ್ಕೆ ಈ ಪುರಸ್ಕಾರ ಲಭಿಸಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights