Mysore : ಆನೆಮರಿಗೆ ಪತ್ನಿ ಪಾರ್ವತಿಯ ಹೆಸರಿಟ್ಟ ಸಿಎಂ ಸಿದ್ಧರಾಮಯ್ಯ…

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಇತ್ತೀಚೆಗೆ ಜನಿಸಿದ ಆನೆಮರಿಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಪಾರ್ವತಿ ಹೆಸರಿಟ್ಟು ಕರೆದರು. ಹೆಣ್ಣು ಮರಿಆನೆಗೆ ಪಾರ್ವತಿ ಎಂದು ನಾಮಕರಣ ಮಾಡಿದ ಸಿಎಂ ಅವರು ಪತ್ನಿ ಹೆಸರನ್ನು ನಾಮಕರಣ ಮಾಡಿ ಸಂತಸ ವ್ಯಕ್ತಪಡಿಸಿದರು. ಮೈಸೂರು ಮೃಗಾಲಯದ 125ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ ಅವರು ಕಳೆದ ಕೆಲ ದಿನಗಳ ಹಿಂದೆ ಐರಾವತಿ ಹಾಗೂ ಅಭಿಎಂಬ ಆನೆ ಜೋಡಿಗೆ ಜನಿಸಿದ್ದ ಹೆಣ್ಣು ಮರಿ ಆನೆಗೆ ನಾಮಕರಣ ಮಾಡಿದರು. ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಅಭಿವೃದ್ದಿಗಾಗಿ ಸಿದ್ಧಪಡಿಸಿರುವ ನೀಲನಕ್ಷೆಯನ್ನು ಮುಖ್ಯಮಂತ್ರಿ ಪರಿಶೀಲಿಸಿದರು. ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆಮಲ್ಲಿಗೆ  ವೀರೇಶ್ ಅವರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

Read more

ಈಶ್ವರ ಅಲ್ಲಾ ತೇರೆ ನಾಮ್: ತಾರತಮ್ಯ ಮಾಡುವವರು ನಾವಲ್ಲ-ಸಿದ್ದು…

 ಮಹಾತ್ಮ ಗಾಂಧಿಯವರ ಉವಾಚವನ್ನು ಉದ್ಘರಿಸಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ.  ಅನ್ಯಧರ್ಮಗಳ ಪ್ರಾರ್ಥನಾ ಮಂದಿರಗಳ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನಬಿಡುಗಡೆ ಮಾಡುವ ರಾಜ್ಯ ಸರ್ಕಾರ ಹಿಂದೂ ದೇವಾಲಯಗಳ ಅಭಿವೃದ್ದಿಗೆ ಕಡಿಮೆ ಅನುದಾನ ಬಿಡುಗಡೆ ಮಾಡುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. ದೇವರು ಒಬ್ಬನೇ ಎಂದು ಮಹಾತ್ಮಗಾಂಧೀಜಿ ಹೇಳಿದ್ದಾರೆ. ನಾವು ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ಐಟಿ ದಾಳಿಗೆ ಯಾರೂಹೆದರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಿಎಂ ಐಟಿ ದಾಳಿ ಅಂದರೆ ಏನು ? ಎಂದು ಪ್ರಶ್ನಿಸಿದರು. ಆದಾಯ ತೆರಿಗೆ ಅಧಿಕಾರಿಗಳು ಯಾವುದೇ ವ್ಯಕ್ತಿ ಐಟಿ ರಿಟರ್ನ್ ಸಲ್ಲಿಸಿದ್ದಾರೆಯೇ ಎಂದು ಪರಿಶೀಲನೆ ಮಾಡ್ತಾರೆ. ಅದನ್ನೇ ದೊಡ್ಡ ವಿಚಾರ ಅಂತ ಬಿಂಬಿಸಲಾಗುತ್ತಿದೆ. ಎಲ್ಲಕಾಲದಲ್ಲೂ ದಾಳಿಗಳು ನಡೆಯುತ್ತಲೇ ಬಂದಿವೆ ಎಂದು ವಿವರಿಸಿದರು. ಮುಂದುವರೆದು ಮಾತನಾಡಿದ ಅವರು  ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನೇ ಹುಡುಕಿ ಹುಡುಕಿ ದಾಳಿ ನಡೆಸುತ್ತಿದ್ದಾರೆ. ಇದು ಬೇಸರದ ಸಂಗತಿ.

Read more

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಗೆ ಒಮ್ಮತದ ನಿರ್ಣಯ ….

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮವೆಂದು ಮಾನ್ಯತೆ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು.   ಲಿಂಗಾಯತ ಧರ್ಮವನ್ನು ವಿಶ್ವಗುರುಬಸವಣ್ಣನವರು  12 ನೇ ಶತಮಾನದಲ್ಲಿ ಸ್ಥಾಪಿಸಿದರೆಂದು ಒಮ್ಮತದಿಂದ ಸಭೆ ನಿರ್ಣಯಿಸಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ  ಸಮಾಲೋಚನಾ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ನಿವೃತ್ತ  ಐಎಎಸ್ ಅಧಿಕಾರಿ ಶಿವಾನಂದ ಜಾಮದಾರ್ ವಿವರಿಸಿದರು. ಬಸವಣ್ಣನವರು ಮತ್ತು ಬಸವಾದಿ ಶರಣರು ಸ್ಥಾಪಿಸಿದ ಐತಿಹಾಸಿಕ ಲಿಂಗಾಯತ ಧರ್ಮ, ಸಿದ್ದಾಂತ ಮತ್ತು ವಚನಗಳನ್ನು ದಯವಿಟ್ಟು ವೀರಶೈವದ ಹೆಸರಿನಲ್ಲಿಬಳಸಿಕೊಳ್ಳಬಾರದು.  ಅಖಿಲ ಭಾರತ ವೀರಶೈವ ಮಹಾಸಭೆಯು 1941ನೇ ಇಸವಿಯಲ್ಲಿ ದಾವಣಗೆರೆಯಲ್ಲಿ ಮಹಾಸಭೆಯ ಅಧಿವೇಶನ ಕರೆಯಲಾಗಿತ್ತು. ಅಲ್ಲಿಒಮ್ಮತದಿಂದ ಅಖಲ ಭಾರತ ಲಿಂಗಾಯತ ಮಹಾಸಭೆ ಎಂದು ಹೆಸರು ಬದಲಾಯಿಸಲು ನಿರ್ಣಯ ಕೈಗೊಂಡಿತು. ಲಿಂಗಾಯತ ಸ್ವತಂತ್ರ ಧರ್ಮವೆಂದು ಘೋಷಣೆಮಾಡಿತ್ತು. ಬೆಳಗಾವಿಯ ನಾಗನೂರ ಪೀಠಾಧ್ಯಕ್ಷರು, ಭಾಲ್ಕಿಯ ಅಂದಿನ ಪಟ್ಟದೇವರು ಈ ನಿರ್ಣಯವನ್ನು ಜಾರಿಗೊಳಿಸುವಂತೆ ಅನೇಕ ಬಾರಿ ಒತ್ತಡ ತಂದಿದ್ದರು. ಈವೇದಿಕೆಯ ಮುಖಾಂತರ ಅದನ್ನು ಜಾರಿಗೆ ತರುವಂತೆ ಸಭೆ ಆಗ್ರಹಿಸಿದೆ ಎಂದು ಜಾಮದಾರ್ ಹೇಳಿದರು.

Read more

ಬಸವಾನುಯಾಯಿಗಳಲ್ಲದ ವಿರಕ್ತರು ಪೀಠ ತ್ಯಜಿಸಲಿ- ತೋಂಟದಾರ್ಯ ಸ್ವಾಮೀಜಿ…

ಬಸವನಿಷ್ಟರ ಪೈಕಿ ಶೇಕಡಾ 90 ರಷ್ಟು ವಿರಕ್ತರು ಬಸವಣ್ಣನವರ ಅನುಯಾಯಿಗಳಾಗಿ ಉಳಿದಿಲ್ಲ ಅಂತವರು ಪೀಠ ತ್ಯಜಿಸಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗಸ್ವಾಮೀಜಿ ಸಲಹೆ ಮಾಡಿದರು. ಬೆಂಗಳೂರಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಲಿಂಗಾಯತ- ಒಂದು ಪ್ರತ್ಯೇಕ ಧರ್ಮ.  ಸಾಂವಿಧಾನಿಕ ಮಾನ್ಯತೆಗೆ ಹಕ್ಕು ಒತ್ತಾಯ ಮಾಡಲು ನಿರ್ಧರಿಸಲಾಯಿತು. ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ

Read more

‘ ನಾ ಸತ್ತರೂ ಮತ್ತೆಂದೂ ದುಬೈಗೆ ಹೋಗಲ್ಲ ‘ ಅಂದ ಕೊಪ್ಪಳದ ಮಹಿಳೆ

ಕೊಪ್ಪಳ : ದುಬೈಯಲ್ಲಿ ಕಿರುಕುಳಕ್ಕೊಳಗಾದ ಮಹಿಳೆ ಕೊಪ್ಪಳ ಕ್ಕೆ ಮರಳಿದ್ದಾರೆ. ಖುರಾನ್ ಕಲಿಸಲೆಂದು ಏಜೆಂಟ್ ದುಬೈಗೆ ಕರೆದುಕೊಂಡು ಹೋಗಿದ್ದ. ಚಾಂದ್ ಸುಲ್ತಾನಾ ಎಂಬ ದುಬೈನಲ್ಲಿ ಕಿರುಕುಳಕ್ಕೊಳಗಾಗಿದ್ದರು. ಕೊಪ್ಪಳ ನಿರ್ಮಿತಿ ಕೇಂದ್ರದ ಓಣಿಯ ನಿವಾಸಿ

Read more

ವಾಹನ ವಿಮೆ ನವೀಕರಿಸಲು ಪಿಯುಸಿ ಅಗತ್ಯ : ಸುಪ್ರೀಂಕೋರ್ಟ್‌

ದೆಹಲಿ : ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್‌ ( ಪಿಯುಸಿ) ಹೊಂದಿಲ್ಲದ ವಾಹನಗಳ ವಿಮೆಯನ್ನು ನವೀಕರಿಸದಂತೆ ವಿಮಾ ಕಂಪನಿಗಳಿಗೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ನ್ಯಾಯಮೂರ್ತಿ

Read more

12 ಸಾವಿರ ವರ್ಷ ಶಿಕ್ಷೆ ವಿಧಿಸುವಂತ ತಪ್ಪು ಮಾಡಿದ ಅಪ್ಪ ಮಾಡಿದ್ದೇನು?

ಕೌಲಾಲಂಪುರ್‌ : ಹೆತ್ತಪ್ಪನೇ ಮಗಳ ಮೇಲೆ 600ಕ್ಕೂ ಹೆಚ್ಚು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ ಹಿನ್ನೆಲೆಯಲ್ಲಿ ಆತನಿಗೆ ಮಲೇಷಿಯಾ ನ್ಯಾಯಾಲಯ 12 ಸಾವಿರ ವರ್ಷಗಳ ಶಿಕ್ಷೆ ವಿಧಿಸುವ

Read more

ರಾಜಕಾರಣಿಗಳು ತಮ್ಮ ಹಿತಾಸಕ್ತಿಗಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ : ಚಂದ್ರಶೇಖರ ಸ್ವಾಮೀಜಿ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಹಾಂತ ದುರುದುಂಡೇಶ್ವರ ಮಠದಲ್ಲಿ 50ಕ್ಕೂ ಹೆಚ್ಚು ಗುರು ವಿರಕ್ತರ ಸ್ವಾಮಿಗಳು ಲಿಂಗಾಯತ ಪ್ರತ್ಯೇಕ ಧರ್ಮ ನಿರ್ಮಾಣಕ್ಕೆ ವಿರೋಧ ವ್ಯಕ್ತ ಪಡಿಸಿ,

Read more

9 ವರ್ಷದ ಬಾಲಕ ಮತ್ತು 19 ವರ್ಷದ ಯುವತಿಯ ಹನಿಮೂನ್..ಇದೆಂಥಾ ಸೀರಿಯಲ್ ಸ್ವಾಮಿ!

ದಿನೇ ದಿನೇ ಕಿರುತೆರೆಯಲ್ಲಿ ಸೀರಿಯಲ್‍ಗಳ ಸಂಖ್ಯೆ ಹೆಚ್ಚಾಗ್ತಿದೆ. ಸಿನಿಮಾಗಿಂತ ಸೀರಿಯಲ್ ಮತ್ತು ರಿಯಾಲಿಟಿ ಶೋಗಳಿಗೆ ಹೆಚ್ಚು ಹೆಚ್ಚು ಟಿಆರ್‌ಪಿ ಬರ್ತಿದೆ. ಇದೇ ಕಾರಣಕ್ಕೋ ಏನೋ ವಿಭಿನ್ನ ಸಬ್ಜೆಕ್ಟ್

Read more

ಕಾರ್ತಿ ಚಿದಂಬರಂ ವಿರುದ್ದದ ಲುಕ್‌ಔಟ್‌ ನೋಟಿಸ್‌ಗೆ ತಡೆ ನೀಡಿದ ಮದ್ರಾಸ್‌ ಹೈಕೋರ್ಟ್‌

ದೆಹಲಿ : ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿರುದ್ದ ನೀಡಲಾಗಿದ್ದ ಲುಕ್‌ಔಟ್‌ ನೋಟಿಸ್‌ಗೆ ಮದ್ರಾಸ್‌ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಕೆಲ

Read more