ಕೇರಳ ಜನರ ಸಂಕಷ್ಟಕ್ಕೆ ಸ್ಪಂದಿಸಿ ಬರೊಬ್ಬರಿ 50 ಕೋಟಿ ನೆರವು ನೀಡಿದ NRI..!

ಕೇರಳ : ಕೇರಳದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲೆಡೆಯಿಂದ ಉದಾರವಾದ ನೆರವು ಹರಿದು ಬರುತ್ತಿದೆ. ಕೇರಳಕ್ಕೆ ಚಿತ್ರರಂಗವೂ ಕೂಡ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದು, ಕೇರಳ ಮೂಲದ ಎನ್ ಆರ್ ಐ ಬಿಲಿಯನೇರ್  ಡಾ. ಶಂಶೀರ್​ ವಯಲಿಲ್​  ತಮ್ಮ ತವರಿಗಾಗಿ 50 ಕೋಟಿ ನೆರವು ನೀಡಿ ಸುದ್ದಿಯಾಗಿದ್ದಾರೆ.

ಎನ್ ಆರ್ ಐ ಬಿಲಿಯನೇರ್ ಅಬುದಾಬಿಯ ವಿಪಿಎಸ್ ಹೆಲ್ತ್ ಕೇರ್ ಮುಖ್ಯಸ್ಥ ಡಾ. ಶಂಶೀರ್ ವಯಲಿಲ್ ಅವರು ಕೇರಳ ಪರಿಹಾರ ನಿಧಿಗೆ ಬರೊಬ್ಬರಿ  50 ಕೋಟಿ ಹಣವನ್ನು ದಾನವಾಗಿ ನೀಡಿದ್ದಾರೆ. ಇದುವರೆಗೂ ವೈಯಕ್ತಿಕವಾಗಿ ದಾನವಾಗಿ ನೀಡಿದ ಅತ್ಯಧಿಕ ಪ್ರಮಾಣದ ಹಣ ಇದಾಗಿದ್ದು, ಪ್ರಮುಖವಾಗಿ ಕೇರಳದ ಜನರು ಎದುರಿಸುತ್ತಿರುವ ನೆರೆ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗಾಗಿ ಈ ಪ್ರಮಾಣದಲ್ಲಿ ನೆರವು ನೀಡಿದ್ದಾರೆ.

ಕೇರಳ ಸದ್ಯ ಅತ್ಯಂತ ಹೀನಾಯವಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನೈಸರ್ಗಿಕ ವಿಕೋಪದ ವಿರುದ್ಧ ಹೋರಾಡಲು ಕೇರಳಿಗರು ಹರಸಾಹಸವನ್ನೇ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರೊಂದಿಗೆ ನಿಂತು ನೆರವು ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಡಾ ವಯಲಿಲ್​ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.