ಹುಬ್ಬಳ್ಳಿ : ಪೋಷಕರಿಗೆ ಲಂಚ ಕೇಳಿ ಸಿಕ್ಕಿಬಿದ್ದ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ..!

ಹುಬ್ಬಳ್ಳಿಯ‌ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಸಿದ್ಧಾರೂಢ ಮೇತ್ರೆ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಹುಬ್ಬಳ್ಳಿಯ ರಾಜನಗರದಲ್ಲಿರುವ ಕೇಂಧ್ರೀ ವಿದ್ಯಾಲಯದ ನಾಲ್ಕನೆಯ ತರಗತಿ ಪ್ರವೇಶಕ್ಕೆ 50 ಸಾವಿರ ರೂಪಾಯಿ ಲಂಚ ಕೇಳಿದ್ದ ಆರೋಪದ ಮೇಲೆ ಸಿದ್ಧಾರೂಢ ಮೇತ್ರೆಯ ಬಂಧನವಾಗಿದೆ. ಬಸವರಾಜ್ ಸಣಪೂಜಾರ್ ಅವರ ಮಗ ಚೇತನ್ ಶಾಲೆಯ ಪ್ರವೇಶಕ್ಕೆ ಪ್ರಾಂಶುಪಾಲ ಲಂಚ ಕೇಳಿದ್ದ.

ಲಂಚ ಕೇಳಿರುವ ಹಿನ್ನೆಲೆಯಲ್ಲಿ ಬಸವರಾಜ್ ಸಣಜಾಪೂರ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆ 7ರ ಅಡಿಯಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಮೇ 12ರಂದು ಪ್ರಕರಣ‌ ದಾಖಲಿಸಿಕೊಂಡ ಸಿಬಿಐ ಪ್ರಾಂಶುಪಾಲನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಸಿಬಿಐ ಘಟಕದಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.