ಸಮ್ಮಿಶ್ರ ಸರ್ಕಾರ ಪೂರ್ಣಾವಧಿ ನಡೆಯುತ್ತೆ ಅಂತ ಜನರಿಗೆ ನಂಬಿಕೆ ಇಲ್ಲ : ಕರುಣಾಕರ ರೆಡ್ಡಿ

ದಾವಣಗೆರೆ : ‘ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಅಂತು ಇದ್ದೇ ಇದೆ, ಪೂರ್ಣಾವಧಿ ಸರ್ಕಾರ ನಡೆಯುತ್ತೆ ಎಂಬುದು ಜನರಿಗೆ ನಂಬಿಕೆ ಇಲ್ಲ ‘ ಎಂದು ಬಿಜೆಪಿ ಮಾಜಿ ಸಚಿವ ಕರುಣಾಕರ ರೆಡ್ಡಿ ಹೇಳಿಕೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆ ಹರಪನಹಳ್ಳಿ ಪಟ್ಟಣದಲ್ಲಿ ಹೇಳಿಕೆ, ನೀಡಿರುವ ಅವರು ‘ ಯಾವ ಟೈಮಲ್ಲಾದ್ರು ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಹುದು, ಬಿಜೆಪಿಗೂ ಹೈಕಮಾಂಡ್ ಇದೆ, ನಮ್ಮವರು ಒಳ್ಳೆಯದು ಕೆಟ್ಟದ್ದು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ‘ ಎಂದಿದ್ದಾರೆ.

‘ ಆಪರೇಷನ್ ಕಮಲದ ಪ್ರಶ್ನೆ ಪರ ಬರಲ್ಲ, ಬಜೆಟ್ ಮಂಡನೆ ಮಾಡುವ ಅವಶ್ಯಕತೆ ಇಲ್ಲ ಅಂತ ಕಾಂಗ್ರೆಸ್ ನವರು ಮಾತನಾಡಿಕೊಳ್ಳುತ್ತಿದ್ದಾರೆ, ಜೆಡಿಎಸ್ ಬಜೆಟ್ ಮಂಡನೆ ಮಾಡಬೇಕು ಎಂದು ನಿರ್ಧಾರ ಮಾಡಿದೆ, ಈ ಸರ್ಕಾರ ಎಲ್ಲಿಯವರೆಗೆ ನಡೆಯುತ್ತೆ ಕಾದು ನೋಡಬೇಕಿದೆ ‘ ಎಂದು ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.