ಕಾಂಗ್ರೆಸ್‌ನಲ್ಲಿನ ಭಿನ್ನಮತ ಶಮನ ಮಾಡಿ, ಇಲ್ಲದಿದ್ದರೆ ಸರ್ಕಾರಕ್ಕೆ ಹೊಡೆತ ಬೀಳುತ್ತೆ : ರಾಹುಲ್‌ಗೆ HDK ಸಲಹೆ

ದೆಹಲಿ :  ದೆಹಲಿಯಲ್ಲಿ ಭಾನುವಾರ ಪ್ರಧಾನಿ ಮೋದಿ ನೇತೃತ್ವದ ನೀತಿ ಆಯೋಗ ಸಭೆಯಲ್ಲಿ ಭಾಗಿಯಾಗಿ ರಾಜ್ಯದ ರೈತರ ಸಾಲಮನ್ನಾ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದ ಸಿಎಂ ಕುಮಾರಸ್ವಾಮಿ ಇಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಭೇಟಿಯಾಗಿದ್ದಾರೆ.

ದೆಹಲಿಯ ತುಘಲಕ್ ರಸ್ತೆಯ ರಾಹುಲ್ ಗಾಂಧಿಯವರ ನಿವಾಸಕ್ಕೆ ತೆರಳಿದ್ದ ಕುಮಾರಸ್ವಾಮಿ, ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿಯವರ ಜೊತೆಗಿನ  ಚರ್ಚೆ ಸೌಹಾರ್ದಯುತವಾಗಿತ್ತು. ಅನೇಕ ಯೋಜನೆಗಳನ್ನು ಜಾರಿಗೆ ತರುವ ಕುರಿತು ಮಾತುಕತೆ ನಡೆಸಿದ್ದೇವೆ. ಸಂಪುಟ ವಿಸ್ತರಣೆ ಕುರಿತು ರಾಹುಲ್ ಗಾಂಧಿಯೇ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿರುವ ಭಿನ್ನಮತವನ್ನು ಶಮನ ಮಾಡಿ. ಇಲ್ಲದಿದ್ದರೆ ಇದು ಸರ್ಕಾರಕ್ಕೆ ನೇರ ಹೊಡೆತ ಬೀಳಲಿದೆ ಎಂದು ರಾಹುಲ್‌ಗೆ ಸಿಎಂ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹೆಚ್ ಡಿಕೆ ರಾಹುಲ್ ರನ್ನ ಭೇಟಿ ಮಾಡಲು ಮುನ್ನವೇ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ರಾಹುಲ್‌ ಗಾಂಧಿಯ ವರನ್ನು ಭೇಟಿ ಮಾಡಿದ್ದು, ರಾಜ್ಯ ಕಾಂಗ್ರೆಸ್ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲ ಇಲ್ಲ, ಸಣ್ಣ ಪುಟ್ಟ ಸಮಸ್ಯೆಗಳಿವೆ ಅವೆಲ್ಲವನ್ನೂ ರಾಜ್ಯ ನಾಯಕರು ಸರಿ ಪಡಿಸುತ್ತಾರೆ ಎಂದು ರಾಹುಲ್ ಗೆ ಕೆ.ಸಿ ವೇಣುಗೋಪಾಲ್ ಮನವರಿಕೆ ಮಾಡಿದ್ದಾರೆ.

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.