ವಿಶ್ವವಿಖ್ಯಾತ ಜೋಗ ಜಲಪಾತ ಇನ್ಮುಂದೆ ಸರ್ವಋತು ಜಲಪಾತ…..!

ಸಾಯೋದ್ರೊಳಗೆ ಒಮ್ಮೆ ನೊಡು ಜೋಗದ ಗುಂಡಿ ಅನ್ನೊ ಮಾತು ಸಹಜ. ಆದ್ರೆ ಈ ಮಾತನ್ನು ಪಾಲಿಸಬೇಕಾದ್ರೆ ಇನ್ಮುಂದೆ ನೀವು ದುಡ್ಡು ಕೊಡಲೇಬೇಕು.. ಏಕೆಂದರೆ, ಸರ್ಕಾರದ ವಿವಾದಾತ್ಮಕ ನಿರ್ಧಾರವೊಂದು ಇಂತಹ ಸ್ಥಿತಿಯನ್ನು ತಂದಿಡುತ್ತಿದೆ.

Jogfalls

ಜೋಗ ಜಲಪಾತವನ್ನು ಸರ್ವ ಋತು ಜಲಪಾತವನ್ನಾಗಿಸಲು ಮುಂದಾಗಿರುವ ಸರ್ಕಾರ, ಖಾಸಗಿಯವರ ಸುಪರ್ಧಿಗೆ ಜಲಪಾತದ ಹೊಣೆಗಾರಿಕೆಯನ್ನು ನೀಡುವ ವಿವಾದಾತ್ಮಕ ನಿರ್ಧಾರ ಮಾಡಿದೆ. ಜೋಗ ಜಲಪಾತವನ್ನು ಸರ್ವ ಋತು ಜಲಪಾತವನ್ನಾಗಿ ಮಾಡಲು ಮುಂದಾಗಿರುವ ಅಬುಧಾಬಿಯ ಉದ್ಯಮಿ ಬಿ.ಆರ್.ಶೆಟ್ಟಿ ಮಾಲಿಕತ್ವದ ಬಿಆರ್ಎಸ್ ವೆಂಚರ್ಸ್ ಗೆ ಈ ಸಂಬಂಧ  ಅನುಮತಿ ನೀಡಲಾಗಿದೆಸರ್ವ ಋತು ಜಲಪಾತವನ್ನಾಗಿ ಅಭಿವೃದ್ಧಿಪಡಿಸಲು ಬಿ.ಆರ್.ಎಸ್ ವೆಂಚರ್ಸ್ 450 ಕೋಟಿ ರೂ ವೆಚ್ಚ ಮಾಡುತ್ತಿದ್ದು, ನೀರನ್ನು ಮರುಬಳಕೆ ಮಾಡಿಕೊಂಡು ಜಲಪಾತ ಅಭಿವೃದ್ಧಿಯಾಗಲಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆತಿದ್ದು, ಸರ್ವ ಋತು ಜಲಪಾತ ಮಾಡಲು ಅಗತ್ಯವಿರುವ ಯೋಜನೆ ರೂಪಿಸಲು ಬಿ.ಆರ್.ಎಸ್ ವೆಂಚರ್ಸ್ ಗೆ ಅನುಮೋದನೆ ನೀಡಲಾಗಿದೆ.

B R Shetty

ಅಭಿವೃದ್ಧಿಯಾದ ಸರ್ವ ಋತು ಜಲಪಾತ ವೀಕ್ಷಣೆಗೆ ನಿಗದಿತ ಶುಲ್ಕ ವಿಧಿಸಲು ಒಪ್ಪಲಾಗಿದ್ದು, ಜೋಗ ಅಭಿವೃದ್ಧಿ ಪ್ರಾಧಿಕಾರದಿಂದ ಶುಲ್ಕ ನಿಗದಿಯಾಗಲಿದೆ. ಈ ಸಂಬಂಧ ಬಿ.ಆರ್.ಎಸ್ ವೆಂಚರ್ಸ್ ಕೊಟ್ಟಿರುವ ಯೋಜನಾ ವರದಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಆದ್ರೆ ಇಷ್ಟು ದೊಡ್ಡ ಮೊತ್ತದ ಬಂಡವಾಳ ಹೂಡುತ್ತಿರುವ ಬಿಆರ್.ಎಸ್ ವೆಂಚರ್ಸ್ ನ ಹಿಂದಿನ ಉದ್ದೇಶದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿಲ್ಲ. ಜೋಗ ಜಲಪಾತವನ್ನು ಈ ಹಿಂದೆ ಜೋಗ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅಭಿವೃದ್ಧಿಪಡಿಸಲು ತಿರ್ಮಾನಿಸಲಾಗಿತ್ತು. ಆದರೆ, ಇದಕ್ಕೆ ಬೇಕಾಗುವ ಅನುದಾನ ಕೊಡಲು ಸಾಧ್ಯವಿಲ್ಲದ ಸರ್ಕಾರ, ಅನಿವಾರ್ಯವಾಗಿ ಖಾಸಗಿಯವರಿಗೆ ಜೋಗದ ಅಭಿವೃದ್ಧಿಯ ಹೊಣೆಗಾರಿಕೆಯನ್ನು ವಹಿಸಿ ಮೌನವಾಗ್ತಿದೆ.

Comments are closed.