ನಾನೀಗ ಬದಲಾಗಿದ್ದೇನೆ, ಬಿಗ್ ಬಾಸ್ ಹೋಗಲು ಅವಕಾಶ ಕೊಟ್ರೆ ಹೋಗಲು ರೆಡಿ – ಹುಚ್ಚಾ ವೆಂಕಟ್

ನಾನೀಗ ಬದಲಾಗಿದ್ದೇನೆ. ಮೊದಲಿನಂತೆ ನಾನು ವರ್ತಿಸುವುದಿಲ್ಲ. ಯಾರಿಗೂ ಕೂಡ ನೋವು ಮಾಡುವುದಿಲ್ಲ. ಈ ಹಿಂದೆ ನಡೆದಿದ್ದು ಎಲ್ಲಾ ಆಕಸ್ಮಿಕ. ಸದ್ಯ ನಾನು ಬದಲಾಗಿದ್ದೇನೆ. ಬದುಕುವುದಕ್ಕಾಗಿ ದುಡಿಯುತ್ತೇನೆ ಎಂದು ಇಂದು ಸುದ್ದಿಗೋಷ್ಠಿ ನಡೆಸಿ ಹುಚ್ಚಾ ವೆಂಕಟ್ ತಿಳಿಸಿದ್ದಾರೆ.

ನನ್ನ ಜೊತೆ ನನ್ನ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲೂ ಹೆದರುತ್ತಿದ್ದಾರೆ. ಸದ್ಯ ನಾನು ಮೊದಲಿನಂತೆ ಇಲ್ಲ. ಮಾಡಿದ ಸಿನಿಮಾಗಳು ಫೇಲಿವರ್ ಕಂಡವು. ಅಪ್ಪ ಸಿನಿಮಾ ಮಾಡಲು ಹಣದ ಸಹಾಯ ಮಾಡಲಿಲ್ಲ. ಹೀಗಾಗಿ ಕಾರ್ ಗ್ಲಾಸ್ ಒಡೆದು ಹಾಕಿದೆ. ಆರ್ಥಿಕವಾಗಿ ತುಂಬಾ ಸಂಕಷ್ಟ ಅನುಭವಿಸಿದ್ದೇನೆ. ನನ್ನಿಂದು ತಪ್ಪುಗಳಾಗಿದೆ ಅದಕ್ಕೆ ಕ್ಷಮೆ ಕೇಳುತ್ತೇನೆ. ಇನ್ಮುಂದೆ ನಾನು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದಿದ್ದಾರೆ.

ಬಿಗ್ ಬಾಸ್ ಗೆ ಹೋಗಲು ಅವಕಾಶ ಕೊಟ್ಟರೆ ನಾನು ಹೋಗಲು ರೆಡಿ ಇದ್ದೇನೆ. ಸಿನಿಮಾ ಆಫರ್, ಅತಿಥಿ ಪಾತ್ರ, ಯಾವುದಾದ್ರೂ ರಿಯಾಲಿಟಿ ಶೋ ಇದ್ದರೂ ಬಂದು ಕೆಲಸ ಮಾಡುತ್ತೇನೆ ಎಂದು ಅಭಿಮಾನಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಹುಚ್ಚಾ ವೆಂಕಟ್ ನಾರ್ಮಲ್ ಆಗಿದ್ದಾರಾ..? ಅಥವಾ ಯಾರೂ ಕೂಡ ಸೇರದ ಕಾರಣ ಈ ರೀತಿ ಹೇಳ್ತಾಯಿದ್ದಾರಾ..? ಅನ್ನೋದೇ ಒಂದು ದೊಡ್ಡ ಪ್ರಶ್ನೆ. ಅದೇನೇ ಆಗಲಿ ಹುಚ್ಚಾ ವೆಂಕಟ್ ನಾರ್ಮಲ್ ಆಗಲಿ ಅನ್ನೋದೇ ಎಲ್ಲರ ಆಶಯ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.