Cricket : Selection : ವಿಂಡೀಸ್ ಸರಣಿ: ಭಾರತ ತಂಡದಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ..

ಮಾಸಾಂತ್ಯ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗೆ ಕರ್ನಾಟಕದ ಮೂವರು ಆಟಗಾರರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.


ಏಕದಿನ ಹಾಗೂ ಟಿ-20ಯಲ್ಲಿ ರಾಹುಲ್ ಜೊತೆಗೆ ಮನೀಶ್ ಪಾಂಡ್ ತಂಡಕ್ಕೆ ಮರಳಿದ್ದಾರೆ. ಇನ್ನು ಎರಡು ಟೆಸ್ಟ್‌ ಪಂದ್ಯಗಳ ಸರಣಿಗೆ ರಾಹುಲ್ ಸಂಗಡ ಮಾಯಂಕ್ ಆರಂಭಿಕರ ಹೊಣೆ ಹೊರಲಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರು ಕನ್ನಡಿಗರು ಇನಿಂಗ್ಸ್ ಆರಂಭಿಸುವ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಮೂರೂ ಪ್ರಕಾರಗಳಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲೇ ಹೇಳಿದಂತೆ ಧೋನಿ ಸರಣಿಯಿಂದ ಹೊರಗುಳಿದಿದ್ದಾರೆ. ಜೊತೆಗೆ ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ವಿಶ್ವಕಪ್ ತಂಡದಿಂದ ದಿಣೇಶ್ ಖಾರ್ತಿಕ್ ಹಾಗೂ ವಿಜಯ್ ಶಂಕರ್‍ ಅವರನ್ನು ಕೈಬಿಡಲಾಗಿದೆ.

ತಂಡಗಳು ಇಂತಿವೆ
ಟೆಸ್ಟ್ ಸರಣಿ: ವಿರಾಟ್ ಕೊಹ್ಲಿ ( ನಾಯಕ) ರಹಾನೆ ( ಉಪನಾಯಕ) ಮಾಯಾಂಕ್ ಅಗರ್ ವಾಲ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಬ್ ಪಂತ್ ( ವಿಕೆಟ್ ಕೀಪರ್ ) ವೃದ್ದಿಮನ್ ಸಹಾ ( ವಿಕೆಟ್ ಕೀಪರ್ ) ಆರ್. ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪೀತ್ ಬೂಮ್ರಾ, ಉಮೇಶ್ ಯಾದವ್

ಏಕದಿನ ಸರಣಿ: ವಿರಾಟ್ ಕೊಹ್ಲಿ ( ನಾಯಕ ) ರೋಹಿತ್ ಶರ್ಮಾ ( ಉಪನಾಯಕ) ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ಸ್ ಅಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್ ( ವಿಕೆಟ್ ಕೀಪರ್ ) ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಕೇದಾರ್ ಜಾದವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ , ನವದೀಪ್ ಸೈನಿ

ಟಿ-20 ಸರಣಿ: ವಿರಾಟ್ ಕೊಹ್ಲಿ ( ನಾಯಕ ) ರೋಹಿತ್ ಶರ್ಮಾ ( ಉಪನಾಯಕ) ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ಸ್ ಅಯ್ಯರ್, ಮನಿಷ್ ಪಾಂಡೆ, ರಿಷಬ್ ಪಂತ್ ( ವಿಕೆಟ್ ಕೀಪರ್ ) ಕೃನಾಲ್ ಪಾಂಡೆ, ಜಡೇಜಾ, ವಾಷಿಂಗ್ಟನ್ ಸುಂದರ್, ರಾಹುಲ್ ಚಾಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಾಹರ್, ನವದೀಪ್ ಸೈನಿ ಇದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.