ನ್ಯೂಜಿಲೆಂಡ್ ವಿರುದ್ಧ ಸೆಣಸಲಿರುವ ಭಾರತ : ರೋಹಿತ್ ಶರ್ಮಾಗೆ ಮಹತ್ವದ ಆಟ

ಭಾರತದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಪಾಲಿಗೆ, ಗುರುವಾರದ ಪಂದ್ಯ ಮಹತ್ವದ್ದಾಗಿದೆ. ಇಲ್ಲಿ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮುಂಬೈಕರ್ ಹೊಸ ಮೈಲುಗಲ್ಲು ಮುಟ್ಟಲಿದ್ದಾರೆ.

ಏಕದಿನ ಕ್ರಿಕೆಟ್‌ ನಲ್ಲಿ ದ್ವಿಶತಕಗಳ ಸರದಾರ ಎಂದು ಗುರುತಿಸಿಕೊಂಡಿರುವ ರೋಹಿತ್, ಗುರುವಾರ ನಡೆಯುವ ಪಂದ್ಯದಲ್ಲಿ ಮಹತ್ತರ ಸಾಧನೆ ಮಾಡಲಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಹಿಟ್ ಮ್ಯಾನ್ 200ನೇ ಏಕದಿನ ಪಂದ್ಯ ಆಡಲಿದ್ದು, ಸ್ಮರಣೀಯ ಪಂದ್ಯದಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ಜೂ.23, 2007ರಂದು ಐರ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದ ರೋಹಿತ್, 12 ವರ್ಷಗಳ ಕಾಲ ಭಾರತ ತಂಡದ ಪರ ಬ್ಯಾಟ್ ಮಾಡಿದ್ದಾರೆ. ರೋಹಿತ್ 199 ಪಂದ್ಯಗಳಿಂದ 7,799 ರನ್ ಹಾಗೂ 22 ಶತಕ ಹಾಗೂ 39 ಅರ್ಧಶತಕ ಸಿಡಿಸಿದ್ದು, 48.14ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ.

ಏಕದಿನ ಕ್ರಿಕೆಟ್‌ ನಲ್ಲಿ 200 ಪಂದ್ಯಗಳನ್ನು ಆಡಿದ ಭಾರತದ 15ನೇ ಆಟಗಾರ ಎಂಬ ಹೆಗ್ಗಳಿಕೆ ರೋಹಿತ್ ಅವರದ್ದಾಗಲಿದೆ. ಈ ಮೊದಲು ಸಚಿನ್ ತೆಂಡೂಲ್ಕರ್ (463), ಮಹೇಂದ್ರ ಸಿಂಗ್ ಧೋನಿ (337), ಮೊಹಮ್ಮದ್ ಅಜರುದ್ದೀನ್ (334), ಸೌರವ್ ಗಂಗೂಲಿ (311), ಯುವರಾಜ್ ಸಿಂಗ್ (304), ಅನಿಲ್ ಕುಂಬ್ಳೆ (271), ವೀರೇಂದ್ರ ಸೆಹ್ವಾಗ್(251), ಹರ್ಭಜನ್ ಸಿಂಗ್ (463), ಜಾವಗಲ್ ಶ್ರೀನಾಥ್ (229), ಸುರೇಶ್ ರೈನಾ (226), ಕಪಿಲ್ ದೇವ್ (225), ವಿರಾಟ್ ಕೊಹ್ಲಿ (222) ಮತ್ತು ಜಾಹೀರ್ ಖಾನ್ (200) ಪಂದ್ಯ ಆಡಿದ ಸಾಧನೆ ಮಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.