IND vs NZ : ಕುಲದೀಪ್, ಶಮಿ ಮಿಂಚು – ಧವನ್ ಅರ್ಧಶತಕ ; ಭಾರತದ ಗೆಲುವಿನ ಶುಭಾರಂಭ

ನೇಪಿಯರ್ ನ ಮೆಕ್ಲೀನ್ ಪಾರ್ಕ್ ಅಂಗಳದಲ್ಲಿ ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಆತಿಥೇಯ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಸುಲಭ ಜಯ ದಾಖಲಿಸಿದ್ದು, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 38 ಓವರ್ ಗಳಲ್ಲಿ 156ಕ್ಕೆ ಆಲೌಟ್ ಆಯಿತು. ಭಾರತದ ಪರವಾಗಿ ಕುಲದೀಪ್ ಯಾದವ್ 4, ಮೊಹಮ್ಮದ್ ಶಮಿ 3 ಹಾಗೂ ಯಜುವೇಂದ್ರ ಚಹಲ್ 2 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಭಾರತ ಓವರ್ ಗಳಲ್ಲಿ  2 ವಿಕೆಟ್ ಕಳೆದುಕೊಂಡು 157 ರನ್ ಸೇರಿಸಿ ಗೆಲುವಿನ ದಡ ಸೇರಿತು. ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ ಅಜೇಯ (75) ಅರ್ಧಶತಕ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ 45 ರನ್ ಗಳಿಸಿ ಲಾಕೀ ಫರ್ಗ್ಯೂಸನ್ ಎಸೆತದಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚಿತ್ತು ನಿರ್ಗಮಿಸಿದರು.

6 ಓವರ್ ಎಸೆದು ಕೇವಲ 19 ರನ್ ನೀಡಿ 3 ವಿಕೆಟ್ ಪಡೆದ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.