Independence day : ಸರಕಾರವಿದ್ರೂ ಶಾಸಕರಿಗಿಲ್ಲ ಧ್ವಜಾರೋಹಣ ಭಾಗ್ಯ, DC ಗಳಿಂದ hosting,,

ರಾಜ್ಯದಲ್ಲಿ ವಿಧಿವತ್ತಾದ ಸರಕಾರವಿದ್ದರೂ ಆಗಸ್ಟ್ 15ರಂದು ಧ್ವಜಾರೋಹಣವನ್ನು ಆಯಾ ಜಿಲ್ಲಾಧಿಕಾರಿಗಳು ಮಾಡಬೇಕಾದ ವಿಷಿತ್ರ, ಅಷ್ಟೇ ಸೋಜಿಗಪ ಪರಿಸ್ಥಿತಿ ರಾಜ್ಯಕ್ಕೆ ಎದುರಾಗಿದೆ.

ಯಡಿಯೂರಪ್ಪನವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 15 ದಿನ ಕಳೆದರೂ ಇನ್ನೂ ಪುರ್ಣ ಪ್ರಮಾಣದ ಸಚಿವ ಸಂಪುಟ ರಚಿಸಿಕೊಳ್ಳಲು ಅವರಿಗೆ ಬಿಜೆಪಿ ಹೈಕಾಮಾಂಡ್ ಅನುಮತಿ ನೀಡಿಲ್ಲ. ಹಾಗಾಗಿ ಬಿಎಸ್ವಿ ಅವರದ್ದು ಈಗಲೂ ಸಿದ್ದರಾಮಯ್ಯ ಹೇಳಿದಂತೆ ಏಕಚಕ್ರಾಧಿಪತ್ಯ.

ಇದೇ ವೇಳೆ ಗುರುವಾರ ಸ್ವತಂತ್ರ ದಿನಾಚರಣೆ ಬಂದಿದೆ. ದೇಶದ ಸಾರ್ವಭೌಮತ್ವದ ಪತಾಕೆಯನ್ನು ಎತ್ತರಕ್ಕೆ ಏರಿಸಿ, ಹಾರಿಸುವ ಈ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಲು ಜಿಲ್ಲಾ ಸಚಿವರೇ ಇಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪನವರೇನೋ ರಾಜಧಾನಿ ಬೆಂಗಳೂರಿನಲ್ಲಿ ಧ್ವಾಜಾರೋಹಣ ಮಾಡುತ್ತಾರೆ. ಆದರೆ ಜಿಲ್ಲಾ ಮಟ್ಟದಲ್ಲಿ ಈ ಕರ್ತವ್ಯ ನಿರ್ವಹಣೆಗೆ ಸಚಿವರೆಂಬೋ ಸಚಿವರೇ ಇಲ್ಲ. ಹಾಗೆಂದು ಸುಮ್ಮನೆ ಕೂರುವ ಹಾಗೂ ಇಲ್ಲ.

ಹಾಗಾಗಿ ಸಚಿವರ ಬದಲಾಗಿ ಈ ಬಾರಿ ಆಗಸ್ಟ್ ೧೫ರಂದು ರಾಷ್ಟ್ರ ಧ್ವಜ ಹಾರಿಸುವ ಪವಿತ್ರ ಕರ್ತವ್ಯ ಆಯಾ ಜಿಲ್ಲಾಧಿಕಾರಿಗಳ ಹೆಗಲಿಗೆ ಬಿದ್ದಿದೆ. ಸರಕಾರದ ಉಪಸ್ಥಿತಿಯ ನಡುವೆಯೂ ಜಿಲ್ಲಾಧಿಕಾರಿಗಳು ಧ್ವಜವಂದನೆ ತೆಗೆದುಕೊಳ್ಳುವಂತಹ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿರುವುದು ಇದೇ ಮೋದಲು ಎನ್ನಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.