ಶಿಕ್ಷಕಿ ಸಂಸಾರಕ್ಕೆ ಮುಳುವಾದ ಶಾಲೆ : ತಂದೆ ಪ್ರೀತಿಯಿಂದ ವಂಚಿತರಾದ ಮಕ್ಕಳು

ನೂರಾರು ಕಿಲೋಮೀಟರ್ ದೂರದಲ್ಲಿನ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ತನ್ನ ಸಂಸಾರದಲ್ಲಿ ಸಂತೋಷವನ್ನೇ ಕಳೆದುಕೊಂಡುಬಿಟ್ಟಿದ್ದಾಳೆ.

ಮಂಡ್ಯ‌ಜಿಲ್ಲೆ ಹುಲಿಕರೆ ಕೊಪ್ಪಲಿ ಸುನೀಲ್ ಜೊತೆ ರಾಜೇಶ್ವರಿ.ಬಿ ಎಂಬುವರ ವಿವಾಹವಾಗಿದೆ. 6 ವರ್ಷಗಳ ಹಿಂದೆ ವಿವಾಹವಾಗಿರುವ ಮಂಡ್ಯದ ಲಾಲಿಪಾಳ್ಯ ನಿವಾಸಿ ರಾಜೇಶ್ವರಿ, ಮದುವೆಗು ಮುನ್ನವೇ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಚಾಗಬಾವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿವರ್ಹಣೆ ಮಾಡುತ್ತಿದ್ದರು.ರಾಜೇಶ್ವರಿ ಮದ್ವೆ ಆದಾಗಿನಿಂದಲೂ ಸುಮಾರು 11 ವರ್ಷಗಳಿಂದ ವರ್ಗಾವಣೆಗೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಪತ್ನಿ ವರ್ಗಾವಣೆ ಸದ್ಯವಾಗದೇ ಪತಿ ಬೇಸರಗೊಂಡು ಸಂಸಾರದಲ್ಲಿ ಸಂತೋಷವೇ ಮಾಸಿ ಹೋಗಿದೆ.

ರಾಜೇಶ್ವರಿ ಪತಿ ಸುನೀಲ್ ಮೈಸೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಜೊತೆಗೆ ಮಂಡ್ಯದಲ್ಲಿ ವ್ಯವಸಾಯ ಕೂಡ ಮಾಡುತ್ತಿದ್ದಾರೆ.  ಅಪ್ಪ ಅಮ್ಮ ಜಮೀನು ಬಿಟ್ಟು ರಾಯಚೂರಿಗು ಹೋಗಲಾರದ ಸ್ಥಿತಿ ಪತಿಯದ್ದು. ಇತ್ತ
ಪತ್ನಿ ನೋಡಲು ಒಮ್ಮೆ 1000 ಕಿಲೋಮೀಟರ್ ಪ್ರಯಾಣಿಸಬೇಕು. ಕುಟುಂಬಸ್ಥರ ಅನಾರೋಗ್ಯ ಅಥವ ಸಾವುನೋವಿಗೆ ಸ್ಪಂದಿಸೋಕೆ ಆಗ್ತಿಲ್ಲ ಎನ್ನುವುದು ಪತಿ ಸುನೀಲ್ ಪತ್ನಿ ರಾಜೇಶ್ವರಿ ಸಂಕಟ.
ಸ್ವಂತ ಚಿಕ್ಕಮ್ಮನ ಸಾವಿಗು ಬರಲಾಗದೆ ಪರದಾಡಿದ್ದ ಶಿಕ್ಷಕಿ ರಾಜೇಶ್ವರಿಗೆ ವರ್ಗಾವಣೆ ಭಾಗ್ಯ ಸಿಕ್ಕಿಲ್ಲ. ಮಂಡ್ಯ ಬೇಡ ಸುತ್ತ ಯಾವುದಾದರೂ ಜಿಲ್ಲೆಗೆ ವರ್ಗಾವಣೆ ಮಾಡಿಕೊಡಿ ಎಂದು ಸರ್ಕಾರಕ್ಕೆ ಮನವಿ‌ ಮಾಡಿದರು ವರ್ಗಾವಣೆ ಸಾಧ್ಯವಾಗಿಲ್ಲ.

ಇಬ್ಬರು ಮಕ್ಕಳು ಸಹ ಪತ್ನಿ ಜೊತೆಯೇ ವಾಸವಾಗಿದ್ದಾರೆ. ತಂದೆ ಪ್ರೀತಿಯಿಂದ ವಂಚಿತರಾಗುತ್ತಿರುವ ಮಕ್ಕಳು ಅಂತ ಪತಿ ಪತ್ನಿ ಬೇಸರ ವ್ಯಕ್ತಪಡಿಸಿದ್ದು, ನೋವಿನಲ್ಲೆ ಸಂಸಾರ ಮಾಡುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.