ಹನಿ ಟ್ರ್ಯಾಪ್ ಪ್ರಕರಣ : ಸಿಸಿಬಿ ಪೊಲೀಸರಿಗೆ ಸ್ಪೋಟಕ ಮಾಹಿತಿ ಲಭ್ಯ…!

ಹನಿ ಟ್ರ್ಯಾಪ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ರಾಜಕೀಯ ರಂಗ ಮಾತ್ರವಲ್ಲದೇ ಕಿರು ತೆರೆಯನ್ನೂ ಬೆಚ್ಚಿ ಬೀಳಿಸಿದೆ.

ಹೌದು…  ರಾಜಕಾರಣಿಗಳ ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಘು ಅಲಿಯಾಸ್ ರಾಘವೇಂದ್ರ ಕುರಿತಂತೆ ಸಿಸಿಬಿ ಪೊಲೀಸರಿಗೆ ಸ್ಪೋಟಕ ಮಾಹಿತಿಗಳು ಲಭ್ಯವಾಗಿವೆ.

ಆರೋಪಿ ರಘು ಮನೆಯಲ್ಲಿ ಸಿಸಿಬಿ ಅಧಿಕಾರಿಗಳು ಸಿಡಿ, ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಹಾಗೂ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದು, 6 ಮೊಬೈಲ್ ಗಳಲ್ಲಿ ಹನಿ ಟ್ರ್ಯಾಪ್ ಗೆ ಒಳಗಾದ ಶಾಸಕರ ಮಾಹಿತಿ ಹಾಗೂ 200 ಕಿರುತೆರೆ ನಟಿಯರ ಜೊತೆ ಸಂಪರ್ಕದಲ್ಲಿದ್ದ ಎನ್ನುವುದು ಪತ್ತೆಯಾಗಿದೆ.

ಈ ಕಿರುತೆರೆ ನಟಿಯರನ್ನು ಬಳಸಿಕೊಂಡು ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ವ್ಯಾನಿಟಿ ಬ್ಯಾಗ್ ಗಳಲ್ಲಿ ಕ್ಯಾಮರಾಗಳನ್ನು ಕೊಟ್ಟು ರಾಜಕಾರಣಿಗಳ ರಾಸಲೀಲೆ ಸೆರೆ ಹಿಡಿದಿದ್ದ ಎನ್ನಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.