ಹುಬ್ಬಳ್ಳಿ : ಹೆಂಗಸರನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡ ಮಹಿಳೆ : ಸಾರ್ವಜನಿಕರಿಂದ ಥಳಿತ..!

ಹುಬ್ಬಳ್ಳಿ : ಪತಿಯನ್ನು ಕಳೆದುಕೊಂಡ, ಪತಿಯಿಂದ ದೂರವಾಗಿರುವ ಮಹಿಳೆಯರನ್ನು ಸಲಿಂಗಕಾಮಕ್ಕೆ ಬಳಸಿಕೊಳ್ಳುತ್ತಿದ್ದಳು ಎನ್ನಲಾದ ಮಹಿಳೆಯೊಬ್ಬರನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಮಂಟೂರ ರಸ್ತೆಯ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.
ಲೀನಾ ಫರ್ನಾಂಡೀಸ್ ಎಂಬ ಮಹಿಳೆಯೇ ಸಾರ್ವಜನಿಕರಿಂದ ಗೂಸಾ ತಿಂದವರು.

ಮಾದಕ ವ್ಯಸನಿಯಾಗಿರುವ ಲೀನಾ ಮಹಿಳೆಯೊಬ್ಬರನ್ನು ಬಲೆಗೆ ಹಾಕಿಕೊಂಡು ಕಳೆದು ಒಂದು ವಾರದಿಂದ ತನ್ನ ವಶದಲ್ಲಿಟ್ಟುಕೊಂಡಿದ್ದಳು. ಇತರೆ ಮಹಿಳೆಯರನ್ನು ಮಾದಕ ವ್ಯಸನಿ ಜಾಲಕ್ಕೆ ತಳ್ಳುತ್ತಿದ್ದ ಈಕೆ ಈಗಾಗಲೇ ಮೂವರು ಮಹಿಳೆಯರನ್ನು ಮಧ್ಯ ವ್ಯಸನಿಯನ್ನಾಗಿ ಮಾಡಿ ಜೀವನ ಹಾಳು ಮಾಡಿದ್ದಾಳೆಂದು ಆರೋಪಿಸಲಾಗಿದೆ.

ಈ ಎಲ್ಲ ಘಟನೆಗಳಿಂದ ಬೇಸತ್ತ ಸಾರ್ವಜನಿಕರು ಮಹಿಳೆಯ ಕುರಿತು ಕೇಶ್ವಾಪೂರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಲೀನಾಳನ್ನು ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.