ಐತಿಹಾಸಿಕ ಚನ್ನಕೇಶವನ ನಾಡಿನಲ್ಲಿ ಗೋವಿನ ದಂಧೆ : ರಾಶಿ ರಾಶಿ ಕೊಂಬುಗಳು ಪತ್ತೆ!

ಬೇಲೂರಿನ ಯಗಚಿ ನದಿಯ ದಡದ ಒಂಟಿ ಮನೆಯಲ್ಲಿ ದನದ ರಾಶಿ ರಾಶಿ ಕೊಂಬುಗಳು ಪತ್ತೆಯಾಗಿವೆ.

ಐತಿಹಾಸಿಕ ಚನ್ನಕೇಶವನ ನಾಡಿನಲ್ಲಿ ಗೋವಿನ ದಂಧೆ ನಡೆಯುತ್ತಿದೆ. ಯಗಚಿ ನದಿಯ ದಡದ ಬಳಿ ಕೊಂಬಿನ ರಾಶಿ ಪತ್ತೆಯಾಗಿದೆ. ಅಬ್ರರ್ ಷರೀಫ್ ಕಳೆದ ಎರಡು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಆಕ್ರಮವಾಗಿ ಎರಡು ಲಾರಿ ಲೋಡು ಕೊಂಬುಗಳು ಪತ್ತೆಯಾಗಿವೆ. ಪರಿಶೀಲನೆ ನಡೆಸಲು ಸ್ಥಳಕ್ಕೆ ಆಗಮಿಸಿದ ಅಧಿಕಾರಗಳ ವಿರುದ್ಧ ಅಬ್ರರ್ ವಾಗ್ವಾದಕ್ಕೆ ಇಳಿದು ಅವರನ್ನು ತಡೆದಿದ್ದಾನೆ.

ಗೋವಿನ ಹಸಿ ಮಾಂಸದ ತ್ಯಾಜ್ಯ ಮತ್ತು ಕೊಂಬುಗಳನ್ನು ಯಗಚಿ ನದಿಯಲ್ಲಿ ತೇಲಿ ಬಿಡುತ್ತಾನೆ. ತಾಲೂಕಿನ ಆಲೂರು ಜನರು ನದಿಯ ನೀರನ್ನು ಕುಡಿಯಲು ಹಾಗೂ ದಿನನಿತ್ಯದ ಕೆಲಸ ಕಾರ್ಯಗಳಿಗೆ ಬಳಸುತ್ತಾರೆ. ಆದರೆ ಈ ವ್ಯಕ್ತಿ ತ್ಯಾಜ್ಯವನ್ನು ನೀರಿಗೆ ಹಾಕಿ ಜಲ ಮಾಲಿನ್ಯ ಮಾಡುತ್ತಿದ್ದಾನೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.