ಹಿಂದು ರಾಷ್ಟ್ರವೆಂದು ಘೋಷಿಸಬೇಕೆಂಬ ಪ್ರಸ್ತಾಪ ತಿರಸ್ಕರಿಸಿದ ನೇಪಾಳ ಸಂಸತ್

ಹಿಂದು ರಾಷ್ಟ್ರವೆಂದು ಘೋಷಿಸಬೇಕೆಂಬ ಪ್ರಸ್ತಾಪವನ್ನು ನೇಪಾಳ ಸಂಸತ್ ಸೋಮವಾರ ತಿರಸ್ಕರಿಸಿದೆ. ಈ ಮೂಲಕ ಆ ಹಿಂದು ಬಹುಸಂಖ್ಯಾತ ದೇಶವು ಜಾತ್ಯತೀತವಾಗಿ ಉಳಿಯಲಿದೆ.
ಹಿಂದುಪರವಾದ ನ್ಯಾಶನಲ್ ಡೆಮಾಕ್ರಟಿಕ್ ಪಾರ್ಟಿ ನೇಪಾಳ ಸಂವಿಧಾನ ತಿದ್ದುಪಡಿ ಮಾಡಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆದರೆ ಮೂರನೇ ಎರಡರಷ್ಟು ಸಂಸತ್ ಸದಸ್ಯರು ನೇಪಾಳ ಜಾತ್ಯತೀತವಾಗಿಯೇ ಇರಬೇಕೆಂದು ಬಯಸಿ ಆ ಪ್ರಸ್ತಾಪ ತಿರಸ್ಕರಿಸಿದ್ದಾರೆ.
ಈ ಹಿಂದೆ ನೇಪಾಳ ಹಿಂದು ರಾಷ್ಟ್ರವಾಗಿತ್ತು. ಆದರೆ 2006ರಲ್ಲಿ ನಡೆದ ಜನಾಂದೋಲನದ ಫಲವಾಗಿ ರಾಜಪ್ರಭುತ್ವ ಕೊನೆಗೊಂಡಿತ್ತು. ಬಳಿಕ 2007ರಲ್ಲಿ ಜಾತ್ಯತೀತ ರಾಷ್ಟ್ರವೆಂದು ಘೋಷಿಸಲಾಗಿತ್ತು.

ಸಂಸತ್ತಿನಲ್ಲಿ ಹಿಂದು ರಾಷ್ಟ್ರ ಪ್ರಸ್ತಾಪ ತಿರಸ್ಕೃತಗೊಳ್ಳುತ್ತಿದ್ದಂತೆ, ಹಿಂದು ಚಳವಳಿಕಾರರು ಹಳದಿ ಹಾಗೂ ಕೇಸರಿ ಧ್ವಜಗಳನ್ನು ಹಿಡಿದು ರಾಜಧಾನಿ ಕಾಠ್ಮಂಡುವಿನಲ್ಲಿ ಪ್ರತಿಭಟಿಸಿದರು. ಸಂಸತ್ ಭವನದತ್ತ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ಆ ಹಂತದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಯೂ ನಡೆಯಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.