ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ ಮಾಡಿದ ಹೆಚ್.ವಿಶ್ವನಾಥ್…
ಬಿಜೆಪಿಯವರು ಹಣ ಕೊಟ್ಟು ಮತಯಾಚನೆ ಮಾಡುತ್ತಿದ್ದಾರೆ ಎನ್ನುವ ಆರೋಪದಿಂದ ಮನನೊಂದು ಹುಣಸೂರಿನ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ ಮಾಡಿದ್ದಾರೆ.
ಹುಣಸೂರಿನ ಬನ್ನಿಕುಪ್ಪೆಯಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ಪ್ರಚಾರದಲ್ಲಿ ಆದ ಅಪಪ್ರಚಾರದಿಂದ ನೊಂದು ಮೊನ್ನೆ ರಾತ್ರಿ ಪತ್ರ ಬರೆದೆ. ಅದು ನಾನೇ ಖುದ್ದಾಗಿ ಬರೆದಿರುವ ಪತ್ರ. ಮೊನ್ನೆ ರಾತ್ರಿ ಬರೆದು ನಿನ್ನೆ ಮುದ್ರಿಸಿ ಇಂದು ಜನರಿಗೆ ತಲುಪಿಸುತ್ತಿದ್ದೇನೆ. ಇದು ನನ್ನ ಕರ್ತವ್ಯ ಕೂಡ. ನಾನೋಬ್ಬ ಸಾಹಿತಿ ಕಾಗಕ್ಕಗುಬ್ಬಕ್ಕಕಥೆ ಬರೆಯುವವನು ನಾನಲ್ಲ. ಮನಸ್ಸಿನ ಮಾತು ಬರೆಯುವ ಲೇಖಕ ನಾನು. ಹೀಗಾಗಿ ಎಲ್ಲವನ್ನು ಜನರಿಗೆ ಹೇಳಲು ಪತ್ರ ಬರೆದಿದ್ದೇನೆ ಎಂದು ಬಿಜೆಪಿಯಿಂದ ಹಣ ಹಂಚಿಕೆ ಆರೋಪಕ್ಕೆ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಹಣ ಹಂಚಲು ನನ್ನಬಳಿ ಹಣ ಇಲ್ಲ. ಹಾಗಾಗಿ ನಾನು ಕಂಡಿರುವ ಕನಸು ಹಂಚುತ್ತಿದ್ದೇನೆ. ಜೆಡಿಎಸ್ ಕಾಂಗ್ರೆಸ್ನವರಿಗೆ ಕನಸು ಕಾಣುವುದೇ ಗೊತ್ತಿಲ್ಲ. ಹೀಗಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.