ಸ್ಕೂಲ್ ಫೀಜ್ ಕಟ್ಟದ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ಗೇಟ್ ಪಾಸ್ ಕೊಟ್ಟ ಪ್ರಿನ್ಸಿಪಾಲ್…!

ಶಿಕ್ಷಕ ಅಥವಾ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಲಾಗಿದೆ. ಗುರು ಸೃಷ್ಟಿ ಸ್ಥಿತಿ ಮತ್ತು ಲಯಕಾರಕಾನೂ ಹೌದಲ್ಲವೇ? ಶಿಕ್ಷಕ ಭೌತಿಕವಾಗಿ ಏನನ್ನೂ ತಯಾರಿಸದಿರಬಹುದು. ಆದರೆ ಮಕ್ಕಳ / ವಿದ್ಯಾರ್ಥಿಗಳ ಜೀವನದ ಗುರಿ, ಉದ್ದೇಶಗಳನ್ನು, ಅವುಗಳನ್ನು ಸಾಧಿಸುವ ಮಾರ್ಗಗಳನ್ನು, ಧ್ಯೇಯವನ್ನು, ವಿದ್ಯಾರ್ಥಿಗಳ ಮನಸಲ್ಲಿ ಸೃಷ್ಟಿ ಮಾಡುವವನು. ಇಂದಿನ ಮಕ್ಕಳನ್ನ ನಾಡಿನ ಪ್ರಜೆಗಳನ್ನ ಮಾಡುವಂತ ಶಕ್ತಿ ಆ ಭಗುವಂತ ಶಿಕ್ಷಕರಿಗೆ ಕೊಟ್ಟಿದ್ದಾನೆ.

ಆದರೆ ಇಲ್ಲೊಬ್ಬ ಶಾಲಾ ಮುಖ್ಯೋಪಾಧ್ಯಾಯ ಮಕ್ಕಳು ಸ್ಕೂಲ್ ಫೀಜ್ ಕಟ್ಟಿಲ್ಲ ಎಂದು ವಿದ್ಯಾರ್ಥಿಗಳನ್ನು ಹೊರ ಹಾಕಿದ ಘಟನೆ ಧಾರವಾಡದ ಬಾಸೆಲ್ ಮಿಶನ್ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ ನಲ್ಲಿ ನಡೆದಿದೆ.

ಹೌದು… ಪೀಜ್ ಕಟ್ಟಲು ತಡವಾದ್ದರಿಂದ ಶಾಲಾ ಪ್ರಿನ್ಸಿಪಾಲ್ ನೂರಾರು ಮಕ್ಕಳನ್ನು ಪೂರ್ವಬಾವಿ ಪರೀಕ್ಷೆಯಿಂದ ಹೊರಕ್ಕೆ ಕಳುಹಿಸಿದ್ದಾರೆ. ಮಕ್ಕಳನ್ನು ಹೊರ ಹಾಕಿದ್ದರಿಂದ ಶಾಲೆಗೆ ಓಡೊಡಿ ಬಂದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸ್ಕೂಲ್ ನಲ್ಲಿ ಕೆಲ ಕಾಲ ಗೊಂದಲದ ವಾತಾವರಣವೇ ಸೃಷ್ಟಿಯಾಗಿತ್ತು. ಪೋಷಕರ ಮತ್ತು ಶಾಲಾ ಸಿಬ್ಬಂದಿಯ ನಡುವೆ ವಾಗ್ವಾದದ ನಂತರ ಸಿಬ್ಬಂದಿ ಮಕ್ಕಳಿಗೆ ಪರಿಕ್ಷೇಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.