ಸಿದ್ದರಾಮಯ್ಯ ಯಾವಾಗ ಬೇಕಾದ್ರೂ CM ಆಗಬಹುದು, 40-50 ಶಾಸಕರು ಅವರ ಬೆನ್ನಿಗಿದ್ದಾರೆ : ಕಂಪ್ಲಿ ಶಾಸಕ

ವಿಧಾನಸೌಧದಲ್ಲಿ ಕಂಪ್ಲಿ ಕಾಂಗ್ರೆಸ್ ಶಾಸಕ ಗಣೇಶ್ ಹೇಳಿಕೆ ನೀಡಿದ್ದಾರೆ. ‘ ಲೋಕಸಭಾ ಚುನಾವಣೆಯವರೆಗೂ ಸಂಪುಟ ವಿಸ್ತರಣೆ ಇಲ್ಲ. ಈಗ ಡಿ.22ಕ್ಕೆ ಸಂಪುಟ ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ, ಸಂಪುಟ ವಿಸ್ತರಣೆಯಾಗುವ ಭರವಸೆ ನಮಗಿಲ್ಲ. ಆದರೂ ಇದು ಪಕ್ಷದ ತೀರ್ಮಾನ ‘ ಎಂದು ಹೇಳಿದ್ದಾರೆ.

‘ ಸಿದ್ದರಾಮಯ್ಯನವರೇ ಮತ್ತೆ ಮುಖ್ಯಮಂತ್ರಿಯಾಗಬೇಕು. ಇದು ನಾನೂ ಸೇರಿದಂತೆ ಹಲ ಶಾಸಕರ ಆಶಯವಾಗಿದೆ . 40-50 ಜನ ಶಾಸಕರು ಸಿದ್ದರಾಮಯ್ಯ ಬೆನ್ನಿಗಿದ್ದಾರೆ. ಅವರು ಯಾವಾಗ ಬೇಕಾದರೂ ಮತ್ತೆ ಸಿಎಂ ಆಗಬಹುದು ‘ ಎಂದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.