ಯಾವುದೇ ಗೊಂದಲವಿಲ್ಲದೆ 5 ವರ್ಷ ಸುಗಮವಾಗಿ ಸರ್ಕಾರ ನಡೆಸುತ್ತೇವೆ : ಪರಮೇಶ್ವರ್ ವಿಶ್ವಾಸ

ಕೊಪ್ಪಳ : ‘ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಸರ್ಕಾರ ಐದು ವರ್ಷ ಸುಗಮವಾಗಿ ಸರ್ಕಾರ ನಡೆಸುತ್ತದೆ ‘ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಹೇಳಿಕೆ ನೀಡಿದ್ದಾರೆ.

‘ ಕಾಂಗ್ರೆಸ್ ಮತ್ತು ಜೆಡಿಎಸ್ ಕುಳಿದು ಒಳ ಒಪ್ಪಂದ ಮಾಡಿಕೊಂಡಿವೆ. ಯಾವುದೇ ಗೊಂದಲಗಳಿಲ್ಲದೆ ಸುದೀರ್ಘವಾಗಿ ಐದು ವರ್ಷ ಸರ್ಕಾರ ನಡೆಸುತ್ತೇವೆ. ಹೊರಗಡೆ ಹೇಳುವರ ಬೇರೆ ಬೇರೆ ಮಾತುಗಳು ಅಪ್ರಸ್ತುತ ‘ ಎಂದು ಕೊಪ್ಪಳದ ಮುನಿರಾಬಾದ್ ಕೆಎಸ್ ಆರ್ ಪಿ ತರಬೇತಿ ಕೇಂದ್ರದಲ್ಲಿ ಹೇಳಿದ್ದಾರೆ.

‘ನಾವು ಸರ್ಕಾರ ರಚನೆ ಮಾಡುವ ಮುನ್ನವೆ ಒಪ್ಪಂದ‌‌‌ ಮಾಡಿಕೊಂಡಿದ್ದೇವೆ. ಕೆಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಅದಕ್ಕು ನಮಗೂ ಯಾವುದೆ ಸಂಬಂಧವಿಲ್ಲ ‘ ಎಂದಿದ್ದಾರೆ.

‘ ಸಾಲಮನ್ನಾ ವಿಚಾರ ಸಾಲಮನ್ನಾ ಮಾಡುವುದಾಗಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷ ಕೂಡ ಅದಕ್ಕೆ ಸಹಮತ ನೀಡಿದೆ. ರೈತರ ಮತ್ತು ಕೃಷಿ ಅಭಿವೃದ್ಧಿಯ ಕಾಳಜಿ ಇರುವುದರಿಂದಲೇ ನಮ್ಮ‌ನಾಯಕ ಸಿದ್ದರಾಮಯ್ಯ ಅವರು ಸಾಲ‌ಮನ್ನಾ ಮಾಡಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ‌ ಮೈತ್ರಿ ಸರ್ಕಾರದ ಪ್ರಥಮ ‌ಆದ್ಯತೆಯಾಗಿದೆ ‘ ಎಂದಿದ್ದಾರೆ.

ಕೊಪ್ಪಳದ ಗಂಗಾವತಿಯ ಚುನಾವಣೆಯಲ್ಲಿ‌‌‌ ನಡೆದ ಖೋಟಾ ನೋಟು ಪ್ರಕರಣ ಕುರಿತು ಹೇಳಿಕೆ ನೀಡಿರುವ ಅವರು ‘ ಒಂದು ವೇಳೆ ಚುನಾವಣೆಯಲ್ಲಿ ಖೋಟಾ ನೋಟು ಚಲಾವಣೆ ಆಗಿದ್ದರೆ, ಚುನಾವಣೆ ಆಯೋಗಕ್ಕೆ‌ ದೂರು ಸಲ್ಲಿಸಬಹುದು. ಅವ್ರು ಯಾರೆ‌‌ ಆಗಿರಲಿ‌ ಚುನಾವಣೆ ಆಯೋಗಕ್ಕೆ ದೂರು‌ ನೀಡಿದರೆ ತನಿಖೆ ನಡೆಸಲಾಗುತ್ತದೆ. ಉತ್ತರ ಕರ್ನಾಟಕವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿಲ್ಲ. ಅದರ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ‘ ಎಂದು ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.