Flood : ನೆರೆ ಸಂತ್ರಸ್ತರ ಮೇಲೆ ದರ್ಪ, MLA, MPಗಳ ಅನುಚಿತ ಧೋರಣೆಗೆ ಸಂತ್ರಸ್ತರ ಆಕ್ರೋಶ,,

ರಾಜ್ಯ ಹಿಂದೆಂದೂ ಕಂಡಿರದಂತಹ ನೆರೆ ಹಾವಳಿಯಿಂದ ತತ್ತರಿಸಿದೆ, ಅರ್ಧ ರಾಜ್ಯ ನೀರಿನಲ್ಲಿ ಮುಳುಗಿದೆ. ಸಹಜವಾಗಿಯೇ ಇಂತಹ ಸಂದರ್ಭದಲ್ಲಿ ತಾವು ಆರಿಸಿ ಕಳುಹಿಸಿದ ಪ್ರತಿನಿಧಿಗಳು ತಮ್ಮ ಸಂಕಷ್ಟಕ್ಕೆ ಧಾವಿಸುತ್ತಾರೆ ಎಂದು ಜನ ಭಾವಿಸುವುದು ಸಹಜ.
ಆದರೆ ಸಂತ್ರಸ್ತರ ಕಷ್ಟಕ್ಕೆ ಮಿಡಿಯುವುದಿರಲಿ, ಅವರ ಮೇಲೆ ದರ್ಪ ತೋರಿದ ಶಾಸಕ, ಸಂಸದರು ನಮ್ಮಲ್ಲಿ ಇದ್ದಾರೆಂಬುದೇ ನಮ್ಮ ದುರಾದೃಷ್ಟ ಎಂದು ಸಂತ್ರಸ್ತರು ಅಲವತ್ತುಕೊಳ್ಳುವಂತಹ ಸ್ಥಿತಿಯನ್ನು ಇಂದು ನೋಡುವಂತಾಗಿದೆ.

ಬರೋದು, ಬಿಡೋದು ನಮ್ಮ ಇಚ್ಛೆ ತಾವು ಓಟು ಹಾಕಿ ವಿಧಾನಸೌಧಕ್ಕೆ ಕಳುಹಿಸಿದ ಮುಖಂಡನಿಮದ ಕಷ್ಟದ ಸಮದರ್ಭದಲ್ಲಿ ಇಂತಹ ಮಾತು ಕೇಳಬೇಕಾಗಿ ಬಂದದ್ದು ಅಳ್ನಾವರದ ಪರಿಹಾರ ಶಿಬಿರದ ಜನ.

ನೆರೆ ಹಾವಳಿ ಬಂದು ಕಳೆದ ಹತ್ತು ದಿನಗಳಿಂದ ಧಾರವಾಡ ಜಿಲ್ಲೆ ಅಳ್ನಾವರ ಪಟ್ಟಣದ ಸಂತ್ರಸ್ಥರ ಕೇಂದ್ರದಲ್ಲಿರುವ ಜನರನ್ನು ಭೇಟಿ ಮಾಡಲು ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣನವರ್ ಬಮದಾಗ ಅಲ್ಲಿನ ಸಂತ್ರಸ್ತರು ಏಕಿಷ್ಟು ತಡವಾಗಿ ಬಮದ್ರಿ ಎಂದು ಸಹಜವಾಗಿಯೇ ಕೇಳಿದರು.

ನಮ್ಮ ಶಾಸಕರಿಗೆ ಅದೇನು ಸಿಟ್ಟಿತ್ತೋ ಏನೋ ನೋಡಿ ಒಮ್ಮೆಲೆ ನಿಮಗೇನು ಬೇಕೋ ಅದನ್ನು ಕೇಳಿ.. ಬರುವುದು, ಬಿಡುವುದು ನನಗೆ ಬಿಟ್ಟ ವಿಚಾರ. ನಿಮಗ್ಯಾಕೆ ಅದೆಲ್ಲಾ..? ಎಂದು ಬಡಬಡಾಯಿಸಿದ್ದಾರೆ.

ಅನಂತ ಹೆಗಡೆಗೆ ಮುತ್ತಿಗೆ

ಅತ್ತ ಕಾರವಾರದಲ್ಲಿ ಮಾಜಿ ಕೇಂದ್ರಸ ಸಚಿವರೂ ಆಗಿರುವ ಹಾಲಿ ಸಂಸದ ಅನಂತ ಕುಮಾರ್‍ ಹೆಗಡೆ ಅವರಿಗೆ ಸಂತ್ರಸ್ತು ಮುತ್ತಿಗೆ ಹಾಕಿ ತಮ್ಮ ಬಳಿ ಬರುವಂತೆ ಒತ್ತಾಯಿಸಿದ ಪ್ರಸಂಗ ನಡೆದಿದೆ.

ಅನಂತಕುಮಾರ್ ಹೆಗಡೆಗೆ ಮುತ್ತಿಗೆ ಹಾಕಿದ ಮುಂಡಗೋಡು ಗ್ರಾಮಸ್ಥರು ಅಲ್ಲಿ ಬಂದು ಆಗಿರುವ ಅನಾಹುತದ ಬಗ್ಗೆ ನೋಡಿ ಎಂದರು. ಚಿಗಳ್ಳಿ ಚಕ್ ಡ್ಯಾಮ್ ಒಡೆದುಹೋದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಗೆ ತ್ತಿಗೆ ಹಾಕಿ ಪ್ರತಿಭಟನೆಯ ವೇಳೆ ಸ್ಥಳಕ್ಕಾಗಮಿಸಿದ ಉ.ಕ.ಸಂಸದ ಹೆಗಡೆಗೆ ಗ್ರಾಮಸ್ಥರು ಮನವಿ ಮಾಡಿದರು.

ಇದಕ್ಕೆ ಅಷ್ಟೇನೂ ಉತ್ಸಾಹದಿಂದ ಸ್ಪಂದಿಸದ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್‍ ಹೆಗಡೆ ಊರಿಗೆ ಬರುವುದು ಮುಖ್ಯವಲ್ಲ ಕೆಲಸ ಮುಖ್ಯವೆಂದು ಹೇಳಿ ಅಲ್ಲಿಂದ ಜಾರಿಕೊಂಡದ್ದು ಅವರ ಸೀರಿಯಸ್‌ನೆಸ್ ತೋರುತ್ತದೆ.

ಇದಕ್ಕೆ ಮುನ್ನ ಬಿಜೆಪಿಯ ಶಾಸಕ ಎಂಪಿ ಕುಮಾರಸ್ವಾಮಿ ಅವರು ತಮ್ಮ ಗ್ರಾಮಕ್ಕೆ ಬರುವಂತೆ ಮನವಿ ಮಾಡಿಕೊಂಡ ಸಂತ್ರಸ್ತರ ಮೇಲೆ ಆವಾಜ್ ಹಾಕಿದ್ದ ವಿಡಿಯೋ ಇನ್ನೂ ಗುಂಗಾಗಿದೆ. ಎಸ್ಪಿ, ಡಿಸಿನೇ ಬರೋಕಕಾಗ್ತಿಲ್ಲ, ನಾನ್ ಹೇಗೆ ಬರ್ಲಿ ಹೋಗು ಎಂದು ಈ ಶಾಸಕ ಮಹೋದಯರು ಆವಾಜ್ ಹಾಕಿದ್ದರು.

ಇನ್ನು ಸಂಕಟದಲ್ಲಿಯೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನಾಯಕರಿಗೇನೂ ಕೊರತೆ ಇಲ್ಲ. ಇದಕ್ಕೆ ಉದಾಹರಣೆ ಬಾಗಲಕೋಟೆ ಕ್ಷೇತ್ರದ ಬಿಜೆಪಿ ಶಾಸಕ ವೀರಣ್ಣ ಚಿರಂತಿಮಠ.

ಸಂತ್ರಸ್ತರಿಗಾಗಿ ಜಿಲ್ಲೆಯೆಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಗಳ ಪೈಕಿ ಒಂದೆಡೆ ಮಾತನಾಡಿದ ಈ ಮಹಾನ್ ನಾಯಕರು ಬಿಜೆಪಿಯು 370 ತೆಗೆದುಹಾಕಿದೆ, ಇನ್ನೂ ಹಲವು ಒಳ್ಳೆಯ ಕೆಲಸಗಳನ್ನು ಮಾಡಿದೆ, ನೀವು ಕಾಂಗ್ರೆಸ್‌ ಕಡೆಗೆ ಹೋಗಬೇಡಿ, ಬಿಜೆಪಿಗೆ ಬನ್ನಿ ಎಂದು ರಾಝಕೀಯ ಭಾಷಣ ಬಿಗಿದು ಬಣ್ಣ ಬಯಲು ಮಾಡಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.