ಭರ್ಜರಿ ಲೈಕ್ಸ್ ಪಡೆದ ಶ್ರೀಮನ್ನಾರಾಯಣ : ಟ್ರೈಲರ್​ ಗೆ ಸಿನಿ ತಾರೆಯರು ಫಿದಾ

ಟ್ರೈಲರ್​ ನಲ್ಲಿ ರಕ್ಷಿತ್​ ಪೊಲೀಸ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಾನೊಂದು ಕಾಲದಲ್ಲಿ ಎಂದು ನಿರ್ಜನ ಪ್ರದೇಶವೊಂದರಲ್ಲಿ ಕಟ್ಟಿಗೆಯ ಮನೆಯೊಂದು ಕಾಣಿಸುವುದರಿಂದ ದೃಶ್ಯ ಪ್ರಾರಂಭವಾಗುತ್ತದೆ. ಈ ಡಕಾಯಿತರ ಗುಂಪನ್ನು ಎದುರಿಸಲು ರಕ್ಷಿತ್​ ಪೊಲೀಸ್​ ಆಗಿ ಬರುತ್ತಾರೆ. ನಂತರ ಕಳ್ಳರ ಗುಂಪನ್ನು ಅವರ ಶೈಲಿಯಲ್ಲಿ ಎದುರಿಸುವ ರೀತಿ ದೃಶ್ಯ ತೋರಿಸುತ್ತದೆ. ನಾಯಕಿ ಶಾನ್ವಿ ಶ್ರೀವಾಸ್ತವ್​ ಕೂಡ ಎರಡು ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ಚಂಬಲ್​ ಕಣಿವೆಯ ಡಕಾಯಿತರ ಗುಂಪಿನಂತೆ ಕಾಣುವ ಕಳ್ಳರ ಜೊತೆ ರಕ್ಷಿತ್​ ಸೆಣಸಾಡುವ ದೃಶ್ಯಗಳನ್ನು ಕಾಣಬಹುದು. ರಕ್ಷಿತ್​ ರ ಕಚಗುಳಿ ಇಡುವ ಮಾತುಗಳಿಂದ ಟ್ರೈಲರ್​ ಗಮನ ಸೆಳೆದಿದೆ.
ಬಿಡುಗಡೆಯಾದ ಒಂದೇ ದಿನದಲ್ಲಿ ಶುಕ್ರವಾರ, ನ.29 ರ ಹೊತ್ತಿಗೆ ಟ್ರೈಲರ್​ 40 ಲಕ್ಷ ವೀಕ್ಷಣೆಯನ್ನು ದಾಟಿದೆ. 4.14 ನಿಮಿಷದ ಈ ಟ್ರೈಲರ್​ ಪ್ರೇಕ್ಷಕನಿಗೆ ಮೆಚ್ಚುಗೆಯಾಗಿದ್ದು ಚಿತ್ರದ ಬಗ್ಗೆ ಭರವಸೆ ಹೆಚ್ಚಿಸಿದೆ.
ಪ್ರೇಕ್ಷಕರು ಸೇರಿದಂತೆ ಅನೇಕ ಸಿನಿ ತಾರೆಯರು ಚಿತ್ರದ ಟ್ರೈಲರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಇದರ ರೀಚ್ ನೋಡಿ,,ಇಂಗ್ಲೀಷ್ ಗು ಡಬ್ ಮಾಡಿ ಹಾಲಿವುಡ್ ಗು ಬಿಡಬಹುದು, ನಿಮ್ಮ ತಂಡದ ಪ್ರತಿಯೊಬ್ಬರ ಶ್ರಮ ಅಗಾಧ ಶುಭಾಶಯಗಳು,” ಎಂದು ನಿರ್ದೇಶಕ ಸುನಿ ಬರೆದುಕೊಂಡಿದ್ದಾರೆ.
ಇದರ ರೀಚ್ ನೋಡಿ,,ಇಂಗ್ಲೀಷ್ ಗು ಡಬ್ ಮಾಡಿ ಹಾಲಿವುಡ್ ಗು ಬಿಡಬಹುದು…@rakshitshetty @Pushkara_M@SachinBRavi @shanvisrivastav ನಿಮ್ಮ ತಂಡದ ಪ್ರತಿಯೊಬ್ಬರ ಶ್ರಮ ಅಗಾಧ
ಶುಭಾಶಯಗಳು ..https://t.co/q9kWIWkon1

— ಸುನಿ/SuNi (@SimpleSuni) November 28, 2019
“ಶ್ರೀಮನ್ನಾರಾಯಣ ಟ್ರೈಲರ್​ ನಲ್ಲಿ ಅದ್ಭುತವಾದದನ್ನು ತೋರಿಸಿದ್ದಕ್ಕೆ ರಕ್ಷಿತ್​ ಗೆ ಧನ್ಯವಾದಗಳು, ಇಡೀ ತಂಡ ಹೀಗೆ ಗುರಿ ಮಟ್ಟಲು ಜೊತೆಯಾಗಿರಲಿ, ಜೊತೆಯೇ ಕಾರ್ಯನಿರ್ವಹಿಸಲಿ,” ಎಂದು ನಟ ಕಿಚ್ಚ ಸುದೀಪ್​ ಟ್ವೀಟ್​ ಮಾಡಿದ್ದಾರೆ.
Thanks @rakshitshetty for dropping in last night to show the trailer much in advance. One word…”Crafted”. 👏🏼👏🏼👏🏼.
Takes a team to stay together, work together, think together n execute together,,,to reach one focal point.
My best wshs to the entire team of #ASN.
Cheers 🥂🥂🤗

— Kichcha Sudeepa (@KicchaSudeep) November 28, 2019
“ಅತ್ಯುತ್ತಮವಾದ ಶ್ರೀಮನ್ನಾರಾಯಣ ಟ್ರೈಲರ್​ ನೀಡಿದ್ದಕ್ಕೆ ರಕ್ಷಿತ್​ ಶುಭಾಶಯಗಳು. ಇಡೀ ತಂಡದ ಪರಿಶ್ರಮ ಟ್ರೈಲರ್​ ನಲ್ಲಿ ಕಾಣಿಸುತ್ತದೆ,” ಎಂದು ನಿರ್ದೇಶಕ ಪ್ರಶಾಂತ್​ ನೀಲ್​ ಹೇಳಿದ್ದಾರೆ.
Congratulations on a brilliant #Asntrailer …..hardwork of the entire team shows in the trailer👏👏@rakshitshetty all set to make us proud yet again🙌👏…
All the best guys👍 https://t.co/x8qAwwuPHv

— Prashanth Neel (@prashanth_neel) November 28, 2019
“ರಕ್ಷಿತ್ ಮತ್ತು ಶ್ರೀಮನ್ನಾರಾಯಣ ತಂಡಕ್ಕೆ ಶುಭಾಶಯಗಳು,” ಎಂದು ನಿರ್ಮಾಪಕ ವಿಜಯ್​ ಕಿರಂದೂರು ಬರೆದುಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಮತ್ತು ಅವನೇ ಶ್ರೀಮನ್ನಾರಾಯಣ ತಂಡಕ್ಕೆ ಶುಭಾಶಯಗಳು.
Best wishes to the entire team of #AvaneSrimanNarayana https://t.co/zIYR6UoPVQ@rakshitshetty @Pushkara_M @shanvisrivastav @PushkarFilms @SachinBRavi @Prakash_HK https://t.co/kA7I9ONSgf

— Vijay Kiragandur (@VKiragandur) November 28, 2019
#Gandhinagar says…It’s a first time, All news papers Headlines space are effectively used for Film Promotions 🤟 Thanks to all the Publications 🙏

When it comes to Promotions, We are the best @PushkarFilms 🕺😘 ಆಟ ಇಲ್ಲಿಂದ ಶುರು …30 days to go #ASN #AvaneSrimanNarayana ❤ pic.twitter.com/fgtGCldSqF

— Pushkara Mallikarjunaiah (@Pushkara_M) November 29, 2019
ಇನ್ನೂ ಅನೇಕರು ಟ್ರೈಲರ್​ ನ್ನು ಮೆಚ್ಚಿ ಟ್ವೀಟ್​ ಮಾಡಿದ್ದಾರೆ.
#AvaneSrimanNarayana trailer is DOPE 🤩 Best trailer ever… ❤❤❤❤❤ Completely loved the way it is made… Watching @rakshitshetty itself a dope thing 🔥 Mannnn, waitinggg for the action on-screen 🥳🥳🥳🥳🥳https://t.co/CHJQ1spVK6

— Ragul Parasuram (@ragulparasuram) November 29, 2019
The trailer is a mine of Easter eggs. Brilliant one. Checkout the indepth analysis here.#asntrailer #AvaneSrimanNarayanahttps://t.co/PGBUtRPXsA

— ಕನ್ನಡಿಗ (@agni_cool) November 29, 2019
#AvaneSrimanNarayana 5 Languages Trailer Launch Photos #ASNTrailer @rakshitshetty #Nov28 @PushkarFilms @Pushkara_M @shanvisrivastav @SachinBRavi @AJANEESHB @onlynikil https://t.co/Df6E1SeTpn

— Madhusudhan (@Madhu_TheAuteur) November 29, 2019
ಶ್ರೀಮನ್ನಾರಾಯಣ ಫಸ್ಟ್​ ಲುಕ್​ ಶನಿವಾರ, ನ.23 ರ ಸಂಜೆ ಬಿಡುಗಡೆಯಾಗಿತ್ತು. ನಟ ರಕ್ಷಿತ್​ ಈ ಹಿಂದೆ ನ.11 ರಂದು ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್​ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಹೇಳಿದ್ದರು.
“ಶ್ರೀಮನ್ನಾರಾಯಣದ ಸಂಕಲನಗೊಂಡ ಮೊದಲ ಟ್ರೈಲರ್​ ಬಿಡುಗಡೆಯಾಗಲು ಸಜ್ಜಾಗಿದ್ದು ಅಭಿಮಾನಿಗಳ ಕಾತರವನ್ನು ಹೆಚ್ಚಿಸಲಿದೆ. ಟ್ರೈಲರ್​ ಬಿಡುಗಡೆಯಾದಾಗ ಎಲ್ಲ ಅಭಿಮಾನಿಗಳ ಪ್ರತಿಕ್ರಿಯೆಯನ್ನು ನೋಡಲು ನಾನು ಕಾಯುತ್ತಿದ್ದೇನೆ,” ಎಂದು ತಮ್ಮ ಟ್ವಿಟರ್​ ನಲ್ಲಿ ಬರೆದುಕೊಂಡಿದ್ದರು.
ರಕ್ಷಿತ್ ಮತ್ತು ಶಾನ್ವಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀಮನ್ನಾರಾಯಣ ಚಿತ್ರ ಕುತೂಹಲ ಮೂಡಿಸುತ್ತಿದೆ. ರಕ್ಷಿತ್​ ಇದರಲ್ಲಿ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾನ್ವಿ ಮೊದಲನೆಯ ಬಾರಿಗೆ ಕನ್ನಡ ಚಿತ್ರಕ್ಕಾಗಿ ಕಂಠ ನೀಡಿದ್ದಾರೆ. ಕನ್ನಡದಲ್ಲಿ ಡಬ್ ಮಾಡುತ್ತಿದ್ದೇನೆ ಎಂದು ಆಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದರು. ಚಿತ್ರಕ್ಕೆ ಧನ್ಯವಾದ ಸಲ್ಲಿಸಿ ಕನ್ನಡಿಗರಿಗೆ ಒಂದು ಪತ್ರವನ್ನೂ ಬರೆದಿದ್ದರು.
ಶ್ರೀಮನ್ನಾರಾಯಣ ಚಿತ್ರವು ವಷಾಂತ್ಯದಲ್ಲಿ ಅಂದರೆ ಡಿಸೆಂಬರ್​ 27 ರಂದು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಲಿದೆ. ಈ ಮಾಹಿತಿಯನ್ನು ಸ್ವತಃ ರಕ್ಷಿತ್​ ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು.
“ಶ್ರೀಮನ್ನಾರಾಯಣ ಡಿಸೆಂಬರ್​ 27 ರಂದು ತೆರೆಗೆ ಬರುತ್ತಿದೆ”, ಎಂದು ಸಂತಸ ವ್ಯಕ್ತಪಡಿಸಿದರು.
ಅಲ್ಲದೆ ಇದೇ ದಿನ ರಕ್ಷಿತ್​ ತಮ್ಮ ಹಿಂದಿನ ಯಶಸ್ವಿ ಚಿತ್ರವಾದ ಕಿರಿಕ್​ ಪಾರ್ಟಿ ಗೆ ಮೂರು ವರ್ಷಗಳು ತುಂಬುತ್ತವೆ. ಅದೂ ಕೂಡ ಡಿಸೆಂಬರ್​ 27 ರಂದು ಬಿಡುಗಡೆಯಾಗಿತ್ತು. ಇದರ ಬಗ್ಗೆಯೂ ರಕ್ಷಿತ್​ ಹೇಳಿಕೊಂಡಿದ್ದರು.
“ನಾವು ಕಿರಿಕ್​ ಪಾರ್ಟಿಯ ಮೂರು ವರ್ಷಗಳ ಸಂಭ್ರಮವನ್ನು ಆಚರಿಸಲಿದ್ದೇವೆ”, ಎಂದು ಬರೆದುಕೊಂಡಿದ್ದರು.
ಚಿತ್ರವು ಬಹುಭಾಷೆಯಲ್ಲಿ ನಿರ್ಮಾಣವಾಗಿದೆ. ತೆಲುಗು ಅವತರಣಿಕೆಯ ಚಿತ್ರಕ್ಕೆ ಟಾಲಿವುಡ್​ ನ ಖ್ಯಾತ ನಾಮ ಚಿತ್ರ ಸಾಹಿತಿಯಾದ ರಾಮಜೋಗಯ್ಯ ಶಾಸ್ತ್ರಿ ಗೀತ ರಚನೆ ಮಾಡಿದ್ದಾರೆ. ಈ ಮುನ್ನ ದರ್ಶನ್​ ರ ಕುರುಕ್ಷೇತ್ರ ಮತ್ತು ಸುದೀಪ್​ ರ ಪೈಲ್ವಾನ್​ ಚಿತ್ರದ ತೆಲುಗು ಅವತರಣಿಕೆಯ ಚಿತ್ರಗಳಿಗೂ ರಾಮಜೋಗಯ್ಯ ಲೇಖನಿ ಹಿಡಿದಿದ್ದರು.
ಶ್ರೀಮನ್ನಾರಾಯಣ ಚಿತ್ರವು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಟ್ರೈಲರ್​ ಈ 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದೆ.
80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀಮನ್ನಾರಾಯಣ ಚಿತ್ರವನ್ನು ಸಚಿನ್​ ರವಿ ನಿರ್ದೇಶನ ಮಾಡಿದ್ದಾರೆ. ಪುಷ್ಕರ ಮಲ್ಲಿಖಾರ್ಜುನಯ್ಯ ಮತ್ತು ಎ ಕೆ ಪ್ರಕಾಶ್​ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್​ ಲೋಕನಾಥ್​ ಮತ್ತು ಚರಣ್​ ರಾಜ್​ ಸಂಗೀತ ನೀಡಿದ್ದಾರೆ.
ಅವನೇ ಶ್ರೀಮನ್ನಾರಾಯಣ ನವಿರು ಪ್ರೇಮ ಮತ್ತು ಹಾಸ್ಯ ಮಿಶ್ರಿ ಕಥೆಯಾಗಿದೆ. ಕರ್ಮ್​ ಚಾವ್ಲಾ ಅವರ ಛಾಯಾಗ್ರಹಣವಿದೆ.
ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್ ಒಳಗೊಂಡಂತೆ ಅಚ್ಯುತ್​ ಕುಮಾರ್​, ಪ್ರಮೋದ್​ ಶೆಟ್ಟಿ, ಬಾಲಾಜಿ ಮನೋಹರ್​ ತಾರಾಗಣದಲ್ಲಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.