Economy : ಸೆಪ್ಟೆಂಬರ್ ತಿಂಗಳಲ್ಲಿ ಕುಸಿತ ಕಂಡ ಆಮದು, ರಫ್ತು ಪ್ರಮಾಣ – ಆತಂಕದಲ್ಲಿ ಭಾರತ..

ತಡವರಿಸುತ್ತಿರುವ ದೇಶದ ಆರ್ಥಿಕ ಸ್ಥಿತಿಗೆ ದ್ಯೋತಕವಾಗಿ ಕಳೆದ ತಿಂಗಳು ರಫ್ತು ಹಾಗೂ ಆಂದಿನ ಪ್ರಮಾಣದಲ್ಲಿ ಭಾರೀ ಕುಸಿತ ದಾಖಲಾಗಿದೆ. ಇದರ ಪರಿಣಾಮವಾಗಿ ಆಮದು-ರಫ್ತು ಅನುಪಾತದಲ್ಲಿಯೂ ಪರಿಣಾಮ ಉಂಟಾಗಿದೆ.
ಪೆಟ್ರೋಲ್, ಇಂಜಿನಿಯರಿಂಗ್, ಚರ್ಮೋದ್ಯಮ, ರಾಸಾಯನಿಕ ಮತ್ತು ಆಭರಣಗಳ ತಗ್ಗಿದ ವಹಿವಾಟಿನ ಪ್ರಭಾವದಿಂದಾಗಿ ಸೆಪ್ಟೆಂಬರ್ ತಿಂಗಳೀಗೆ ದೇಶದ ರಫ್ತು ಪ್ರಮಾಣ ಶೇ. 6.57ರಷ್ಟು ಕುಸಿತ ಕಂಡಿತು. 30 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳ ರಫ್ತು ಪ್ರಮಾಣ ಇಳಿಕೆ ಕಂಡಿದೆ.

ಇದೇ ವೇಳೆ ಇಂಧನ ತೈಲ ಮತ್ತು ಚಿನ್ನದ ಆಮದಿನಲ್ಲಿ ಭಾರೀ ಪ್ರಮಾಣದ ಕುಸಿತ ದಾಖಲಾಗಿದೆ. ಕಳೆದ ತಿಂಗಳೊಂದರಲ್ಲಿಯೇ ದೇಶದೆ ಆಮದು ಪ್ರಮಾಣ ಶೇ. 13.85ರಷ್ಟು ಇಳಿಮುಖ ಕಂಡಿದೆ.

ಈ ಅವಧಿಯಲ್ಲಿ ತೈಲ ಆಮದು ಶೇ. 18.33ರಷ್ಟು ಕುಸಿದರೆ ಇತರ ಉದ್ಯಮಗಳ ಆಮದು ಶೇ. 12.3ರಷ್ಟು ಕುಸಿದವೆ ಎಂದು ಅಧಿಕೃತ ಮಾಹಿತಿ ನೀಡಲಾಗಿದೆ.

ಸೆಪ್ಟೆಂಬರ್ ತಿಂಗಳಿಗೆ ಕೊನೆಗೊಂಡ ಹಿಂದಿನ ಆರು ತಿಂಗಳ ಅವಧಿಗೆ ಒಟ್ಟಾರೆಯಾಗಿ ರಫ್ತು ಪ್ರಮಾಣ ಶೇ. 7ರಷ್ಟು ಹಾಗೂ ಆಮದು ಪ್ರಮಾಣ ಶೇ. 2.39ರಷ್ಟು ಕುಸಿತ ಕಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights