ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೊ ವಿದಾಯ

ವೆಸ್ಟ್ ಇಂಡೀಸ್ ತಂಡದ ಆಲ್ರೌಂಡರ್ ಡ್ವೇನ್ ಬ್ರಾವೊ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ-20 ಮೂರೂ ಮಾದರಿಯ ಕ್ರಿಕೆಟ್ ನಿಂದಲೂ 35 ವರ್ಷದ ಡ್ವೇನ್ ಬ್ರಾವೊ ನಿವೃತ್ತಿ ಘೋಷಿಸಿದ್ದಾರೆ. ಆದರೆ ವಿಶ್ವಾದ್ಯಂತ ನಡೆಯಲಿರುವ ಟಿ-20 ಲೀಗ್ ಗಳಲ್ಲಿ ಫ್ರಾಂಚೈಸಿಗಳ ಪರವಾಗಿ ಆಡುವುದನ್ನು ಬ್ರಾವೊ ಮುಂದುವರೆಸಲಿದ್ದಾರೆ.

2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಡ್ವೇನ್ ಬ್ರಾವೊ ವಿಂಡೀಸ್ ಪರವಾಗಿ 40, ಟೆಸ್ಟ್, 164 ಏಕದಿನ ಹಾಗೂ 66 ಟಿ20 ಪಂದ್ಯಗಳನ್ನಾಡಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.