ಮನೆಯಿಂದ ಪಬ್‌ಗೆ ಸುರಂಗವನ್ನೇ ಕೊರೆದು ನಡೆಸುತ್ತಿದ್ದ ದಿನಾರಾತ್ರಿ ಪಾನಗೋಷ್ಠಿ..!

ನೀವು ನಂಬುತ್ತೀರೋ ಬಿಡುತ್ತೀರೋ, ಪ್ಲಂಬರ್ ಒಬ್ಬ ಮನೆಯ ಬೆಡ್‌ರೂಂನಿಂದ ಸಮೀಪವಿರುವ ಪಬ್‌ಗೆ ಸುರಂಗವನ್ನೇ ಕೊರೆದಿದ್ದಾನೆ. ಅಷ್ಟೇ ಅಲ್ಲ, ದಿನಾರಾತ್ರಿ ಪತ್ನಿ ಮಲಗಿದ್ದಾಗ ಪಾನಗೋಷ್ಠಿ ನಡೆಸುತ್ತಿದ್ದ!

ಐರ್ಲೆಂಡ್‌ನ ಈ ಪ್ಲಂಬರ್‌ ಪೇಸ್ಟಿಯ ಈ ಕ್ರಿಮಿನಲ್ ಐಡಿಯಾಕ್ಕೆ ಪ್ರೇರಣೆ ನೀಡಿದ್ದು, ಶಾಶಾಂಕ್ ರಿಡೆಂಪ್ಶನ್ ಎಂಬ ಸಿನಿಮಾವಂತೆ.
ಈ ಕೆಲಸಕ್ಕೆ ಈತನಿಗೆ ತಗಲಿದ್ದು ಬರೋಬ್ಬರಿ 15 ವರ್ಷಗಳು. ಯಾಕಪ್ಪಾ ಈ ಕೆಲಸ ಮಾಡಿದೆ ಅಂದರೆ ಹೆಂಡತಿಯ ಗೊರಕೆ ಸಹಿಸೋದಿಕ್ಕಾಗುವುದಿಲ್ಲ ಸಾರ್ ಅಂತಾನೆ.

1994ರಲ್ಲಿ ಆ ಸಿನಿಮಾ ನೋಡಿದ ಮೇಲೆ ತಾನೂ ಏನಾದರೂ ಮಾಡಬೇಕು ಅನ್ನಿಸಿತಂತೆ ಇವನಿಗೆ. ಮನೆಯ ಮಂಚದ ಅಡಿಯಿಂದ 800 ಮೀ. ದೂರವಿರುವ ಪಬ್‌ದ ದಿಕ್ಕಿನಲ್ಲಿ ಸುರಂಗ ಕೊರೆಯತೊಡಗಿದ. ಹೆಂಡತಿ ಶಾಪಿಂಗ್‌ಗೆ ಹೋಗುವ ವೇಳೆಯಲ್ಲಿ ಈತ ಸುರಂಗ ಕೊರೆಯುವ ಕೆಲಸ ಮಾಡುತ್ತಿದ್ದನಂತೆ.

2009ರಲ್ಲಿ ಸುರಂಗ ಪೂರ್ಣಗೊಂಡಿತು. ಪಬ್‌ನ ಮಹಿಳೆಯರ ಶೌಚಾಲಯ ಹಾಗೂ ಸ್ಟೋರ್ ರೂಂ ಬಳಿ ಸುರಂಗ ತೆರೆಯಿತು. ಕಳೆದ 5 ವರ್ಷಗಳಿಂದ ನಿತ್ಯ ರಾತ್ರಿ 11 ಗಂಟೆಗೆ ಪಬ್‌ಗೆ ಬಂದು ಕುಡಿಯುತ್ತಿದ್ದೆ. 1 ಗಂಟೆಯಲ್ಲಿ ವಾಪಸ್ ಮರಳುತ್ತಿದ್ದೆ. ಹೆಂಡತಿಗೆ ಗೊತ್ತೇ ಆಗುತ್ತಿರಲಿಲ್ಲ ಎನ್ನುತ್ತಾನೆ ಪೇಸ್ಟಿ.
ಚರಂಡಿ ಸಮಸ್ಯೆ ಕಾಣಿಸಿಕೊಂಡಾಗಲೇ ಹೊರಜಗತ್ತಿಗೆ ಈ ಸುರಂಗದ ಕಥೆ ಗೊತ್ತಾಗಿದ್ದು. ಸದ್ಯ ಈತನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.