‘ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವುದೇ ದೇವರಿಗೆ ಸಲ್ಲಿಸುವ ಭಕ್ತಿ, ಗೌರವ’- ಸಿದ್ಧರಾಮಯ್ಯ

ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಪತ್ರಕರ್ತರ ಸಮಾವೇಶದ ನಂತರ, ಸಮಾವೇಶದಲ್ಲಿ ತಾವು ಮಾಡಿದ ಭಾಷಣದ ಮುಖ್ಯಾಂಶಗಳನ್ನು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ‘ಮೀನು ಸೇವಿಸಿ ದೇವಾಲಯಕ್ಕೆ ಹೋದೆ ಎಂದು ಟೀಕಿಸಿದರು. ಹಾಗಾದರೆ ಮಾಂಸ ನೈವೇದ್ಯಕ್ಕೆ ಇಟ್ಟ ಬೇಡರ ಕಣ್ಣಪ್ಪನಿಗೆ ದೇವರು ಒಲಿದಿದ್ದೇಕೆ? ನನಗೂ ದೇವರಲ್ಲಿ ನಂಬಿಕೆ ಇದೆ’ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಹೌದು.. ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಮ್ಮನ್ನು ಟೀಕಿಸುತ್ತಿದ್ದ ಟೀಕಾಕಾರರಿಗೆ ಖಡಕ್ ಪ್ರತ್ಯುತ್ತರ ನೀಡಿದ ಅವರು, ಪೂರ್ವಗ್ರಹಮುಕ್ತ, ಶುದ್ಧ ಪತ್ರಿಕೋದ್ಯಮ ಇಂದಿನ ಅಗತ್ಯ ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು. ಈ ಸಮಾವೇಶದ ನಂತರ ಸಿದ್ದರಾಮಯ್ಯ ಮಾಡಿದ ಸಾಲು ಸಾಲು ಟ್ವೀಟ್ ಗಳಿವು.

ಮೀನು ಸೇವಿಸಿ ದೇವಾಲಯಕ್ಕೆ ಹೋದೆ ಅಂದ್ರು! ಮೀನು ಸೇವಿಸಿ ದೇವಾಲಯಕ್ಕೆ ಹೋದೆ ಎಂದು ಟೀಕಿಸಿದರು. ಹಾಗಾದರೆ ಮಾಂಸ ನೈವೇದ್ಯಕ್ಕೆ ಇಟ್ಟ ಬೇಡರ ಕಣ್ಣಪ್ಪನಿಗೆ ದೇವರು ಒಲಿದಿದ್ದೇಕೆ? ನನಗೂ ದೇವರಲ್ಲಿ ನಂಬಿಕೆ ಇದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವುದೇ ದೇವರಿಗೆ ಸಲ್ಲಿಸುವ ಭಕ್ತಿ, ಗೌರವ ಎಂದು ನಂಬಿದವನು ನಾನು.‌ ಮಾಡಬಾರದ್ದನ್ನು ಮಾಡಿ ಮಂಡಿಯೂರಿದರೆ ದೇವರು ಕ್ಷಮಿಸುವನೇ?- ಸಿದ್ದರಾಮಯ್ಯ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.