ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಬಲಿತೆಗೆದುಕೊಂಡ ಆರೋಪಿಗಳ ಬಂಧನ

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಬಲಿತೆಗೆದುಕೊಂಡ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಣಕ್ಕಾಗಿ ಸ್ನೇಹಿತನ ಪ್ರಾಣವನ್ನೇ ತೆಗೆದ ಇಬ್ಬರು ಪಾಪಿ ಆರೋಪಿಗಳು ತಲೆಮರಿಸಿಕೊಂಡಿದ್ದರು. ಇದೀಗ ಮೈಸೂರು ಜಿಲ್ಲೆಯ ವರುಣಾ ಠಾಣಾ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಲೋಕೇಶ್ ಹಾಗೂ ಪ್ರಮೋದ್ ಬಂಧಿತ ಆರೋಪಿಗಳಾಗಿದ್ದಾರೆ. ಹಣಕ್ಕಾಗಿ ಜನವರಿ 6ರಂದು ಮೈಸೂರು ತಾಲ್ಲೂಕಿನ ಎಂ.ಸಿ.ಹುಂಡಿಯ ಫಾರಂ ಹೌಸ್ ನಲ್ಲಿ  ತನ್ನ ಸ್ನೇಹಿತ ಪ್ರಶಾಂತ್ ನನ್ನ ಇಬ್ಬರು ಆರೋಪಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ಹತ್ಯೆ ನಂತರ ಆರೋಪಿಗಳು ಹಿನಕಲ್ ನ ಸ್ನೇಹಿತನ ಮನೆಯಲ್ಲಿ ಅವಿತುಕೊಂಡು ಕುಳಿತಿದ್ದರು. ಈ ಕುರಿತು ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳನ್ನ ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.