ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿ…

ನಟ ರವಿಚಂದ್ರನ್ ಮಗಳು ಗೀತಾಂಜಲಿ ಅವರ ಮದುವೆ ಉದ್ಯಮಿ ಅಜಯ್ ಜೊತೆ ಮದುವೆ ಅದ್ಧೂರಿಯಾಗಿ ನೆರವೇರಿದೆ.

ಗೀತಾಂಜಲಿ ಮತ್ತು ಅಜಯ್ ಅವರ ವಿವಾಹ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೈಟ್ ಪೆಟಲ್ಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಗಾಜಿನ `ರಾಜಹಂಸದ ವೇದಿಕೆ’ ಯಲ್ಲಿ ನಡೆದಿದೆ. ಕುಟುಂಬದವರ ಸಮ್ಮುಖದಲ್ಲಿ ಅಜಯ್ ಗೀತಾಂಜಲಿ ಅವರಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ.

ಮಂಗಳವಾರ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಬಂದು ನವಜೋಡಿಗೆ ಶುಭಾ ಹಾರೈಸಿದ್ದರು. ಆರತಕ್ಷತೆಯಲ್ಲಿ ಗೀತಾಂಜಲಿ ಕಡು ಹಸಿರು ಬಣ್ಣದ ಗೌನ್‍ನಲ್ಲಿ ಧರಿಸಿ ಮಿಂಚುತ್ತಿದ್ದರೆ, ಇತ್ತ ವರ ಅಜಯ್ ಕೂಡ ಕಪ್ಪು ಬಣ್ಣದ ಶೂಟ್ ತೊಟ್ಟು ಮಿಂಚಿದ್ದರು.

ಸೂಪರ್ ಸ್ಟಾರ್ ರಜಿನಿಕಾಂತ್, ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ನಟ ಸುದೀಪ್ ದಂಪತಿ, ನಿರ್ದೇಶಕ ಪ್ರೇಮ್, ರಕ್ಷಿತಾ, ರಾಕ್‍ಲೈನ್ ವೆಂಕಟೇಶ್, ಸುಮಲತಾ, ಸುಧಾರಾಣಿ ಸೇರಿದಂತೆ ಇನ್ನೂ ಅನೇಕ ನಟ-ನಟಿಯರು ಪಾಲ್ಗೊಂಡಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.